janadhvani

Kannada Online News Paper

ಸೌದಿ: ಉದ್ಯೋಗಗಳನ್ನು ಬದಲಾಯಿಸುವ ಷರತ್ತುಗಳು ಪ್ರಕಟ

ರಿಯಾದ್: ಸೌದಿ ಅರೇಬಿಯಾದ ಹೊಸ ಪ್ರಾಯೋಜಕತ್ವ ವ್ಯವಸ್ಥೆಯಲ್ಲಿ ಉದ್ಯೋಗಗಳನ್ನು ಬದಲಾಯಿಸುವ ಷರತ್ತುಗಳನ್ನು ಸಚಿವಾಲಯ ಪ್ರಕಟಿಸಿದೆ. ಪ್ರಾಯೋಜಕರಿಗೆ ಮುಂಗಡ ನೋಟಿಸ್ ನೀಡಿದ ನಂತರವಷ್ಟೇ ಕೆಲಸಗಾರನು ಹೊಸ ಕೆಲಸಕ್ಕೆ ಸೇರಬಹುದು.ಉದ್ಯೋಗ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ ಕೆಲಸ ಬದಲಾವಣೆಗೆ ಸಂಸ್ಥೆಯ ಅನುಮತಿ ಅಗತ್ಯವಿಲ್ಲ. ಸಚಿವಾಲಯದ ಅಡಿಯಲ್ಲಿ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿದ ಉದ್ಯೋಗ ಒಪ್ಪಂದದ ಆಧಾರದ ಮೇಲೆ ಇದು ನಡೆಯಲಿದೆ.

ಮಾರ್ಚ್‌ನಿಂದ ಜಾರಿಗೆ ಬರುವ ಉದ್ಯೋಗ ಒಪ್ಪಂದ ವ್ಯವಸ್ಥೆಯಡಿ, ಕೆಲಸಗಾರನು ಅಗತ್ಯವಿದ್ದಾಗ ಉದ್ಯೋಗಗಳನ್ನು ಬದಲಾಯಿಸಬಹುದು. ಇದಕ್ಕಾಗಿ ಐದು ಷರತ್ತುಗಳನ್ನು ಅನೀಸರಿಸಬೇಕಿದೆ.

1. ಸೌದಿ ಕಾರ್ಮಿಕ ಕಾನೂನನ್ನು ಅನುಸರಿಸಬೇಕು

2. ಸೌದಿಗೆ ಪ್ರವೇಶಿಸಿ ಒಂದು ವರ್ಷ ಪೂರ್ಣಗೊಳಿಸಿರಬೇಕು.

3. ಕಂಪನಿ ಅಥವಾ ಸ್ಥಾಪನೆಯೊಂದಿಗೆ ಉದ್ಯೋಗ ಒಪ್ಪಂದವನ್ನು ಹೊಂದಿರಬೇಕು.

4. ಉದ್ಯೋಗ ಪ್ರಸ್ತಾಪವನ್ನು ಉದ್ಯೋಗದಾತರು ಸಚಿವಾಲಯದ ಕಿವಾ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು.

5. ನೋಟಿಸ್ ಅವಧಿಯಾಗಿ ಮೂರು ತಿಂಗಳ ಮುಂಚಿತವಾಗಿ ಉದ್ಯೋಗ ಬದಲಾವಣೆಯ ಬಗ್ಗೆ ಸಂಸ್ಥೆಗೆ ತಿಳಿಸಬೇಕು.

ಇದೆಲ್ಲವನ್ನೂ ಪಾಲಿಸಿದ್ದಲ್ಲಿ, ಕೆಲಸಗಾರನನ್ನು ತಡೆದು ನಿಲ್ಲಿಸುವುದು,ಹುರೂಬ್ ಮಾಡುವುದು ಹಾಗೂ ಇಕಾಮಾವನ್ನು ನವೀಕರಿಸದಿರುವುದು ಸಾಧ್ಯವಿಲ್ಲ. ಆದರೆ, ಉದ್ಯೋಗ ಒಪ್ಪಂದವನ್ನು ಬದಲಾಯಿಸಲಾಗುವುದಿಲ್ಲ, ಎಕ್ಸಿಟ್ನಿ ಮಾತ್ರ ನೀಡಲಾಗುವುದು ಎಂದು ಕಂಪನಿಯೊಂದಿಗೆ ಲಿಖಿತ ಒಪ್ಪಂದವಿದ್ದರೆ, ಕೆಲಸಗಾರನು ಅದನ್ನು ಪಾಲಿಸಬೇಕಾಗುತ್ತದೆ.

ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ, ಉದ್ಯೋಗದಾತನ ಅನುಮತಿ ಮತ್ತು ಉದ್ಯೋಗದಾತರಿಗೆ ಮುಂಗಡ ಸೂಚನೆ ನೀಡದೆ ಕೆಲಸಗಳನ್ನು ಬದಲಾಯಿಸಬಹುದು.ಇದಕ್ಕೆ ಕಾರಣಗಳು ಈ ಕೆಳಗಿನಂತಿರಬೇಕು.

1. ಕೆಲಸಗಾರನು ಕೆಲಸಕ್ಕೆ ಪ್ರವೇಶಿಸಿದ ಮೂರು ತಿಂಗಳೊಳಗೆ ಉದ್ಯೋಗ ಒಪ್ಪಂದವನ್ನು ಕಿವಾ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡದಿದ್ದರೆ, ಸತತ ಮೂರು ತಿಂಗಳು ಸಂಬಳ ವಿಳಂಬವಾದರೂ ಕೆಲಸಗಾರನು ಕೆಲಸವನ್ನು ಬದಲಾಯಿಸಬಹುದು.

2. ಪ್ರಾಯೋಜಕ ನಿಧನ ಹೊಂದಿದರೆ, ಪ್ರಕರಣಕ್ಕೆ ಒಳಗಾದರೆ ಅಥವಾ ಇಕಾಮಾವನ್ನು ಅವಧಿಯಲ್ಲಿ ನವೀಕರಿಸದಿದ್ದರೆ, ಉದ್ಯೋಗಗಳನ್ನು ಬದಲಾಯಿಸಲು ಅನುಮತಿ ಅಗತ್ಯವಿಲ್ಲ.

3. ಉದ್ಯೋಗದಾತನ ಬೆನಾಮಿ ವ್ಯವಹಾರದ ಬಗ್ಗೆ ದೂರು ನೀಡಿದ್ದರೂ, ಕೆಲಸವನ್ನು ಬದಲಿಸಬಹುದು. ಆದರೆ ಕೆಲಸಗಾರ ಕೂಡ ಅದರ ಭಾಗವಾಗಿದ್ದರೆ ಕ್ರಮ ಕೈಗೊಳ್ಳಲಾಗುವುದು.

4. ಉದ್ಯೋಗದಾತ ಕೆಲಸಗಾರರನ್ನು ಅಕ್ರಮ ಕಳ್ಳಸಾಗಾಣಿಕೆ ನಡೆಸುವ ಪುರಾವೆಗಳನ್ನು ಒದಗಿಸಿದರೂ ಕೆಲಸ ಬದಲಿಸಗಬಹುದು.

5. ಉದ್ಯೋಗದಾತರ ವಿರುದ್ಧ ಪ್ರಕರಣ ದಾಖಲಾಗಿ, ವಿಚಾರಣೆಗೆ ಹಾಜರಾಗದಿದ್ದರೂ ತನ್ನ ಕೆಲಸವನ್ನು ಬದಲಾಯಿಸಬಹುದು.

ಇದಲ್ಲದೆ, ಕಂಪನಿಯು ಮತ್ತೊಂದು ಕಂಪನಿಯಿಂದ ಕಾರ್ಮಿಕರನ್ನು ಸ್ವೀಕರಿಸಲು ನಾಲ್ಕು ಷರತ್ತುಗಳಿವೆ.

1. ಕೆಲಸಗಾರನನ್ನು ಸ್ವೀಕರಿಸುವ ಕಂಪನಿಯು ಹೊಸ ವೀಸಾಗಳನ್ನು ನೀಡಲು ಅರ್ಹರಾಗಿರಬೇಕು

2. ನಿರಂತರವಾಗಿ ಸಂಬಳ ಪಾವತಿಸದೆ, ಸಚಿವಾಲಯ ನಿಷೇಧಿಸಿರುವ ಕಂಪನಿಯಾಗಬಾರದು.

3. ಉದ್ಯೋಗ ಒಪ್ಪಂದವನ್ನು ಸಚಿವಾಲಯದೊಂದಿಗೆ ಬಂಧಿಸಿರುವ ಸಂಸ್ಥೆಯಾಗಿರಬೇಕು.

4. ಸಚಿವಾಲಯದ ಸ್ವಯಂ ಪರಿಶೀಲನಾ ಯೋಜನೆಯ ಭಾಗವಾಗಿರಬೇಕು.

ಈ ಷರತ್ತುಗಳನ್ನು ಪೂರೈಸುವ ಯಾವುದೇ ಕಂಪನಿಯು ಮತ್ತೊಂದು ಕಂಪನಿಯಿಂದ ಕೆಲಸಗಾರನನ್ನು ಸ್ವೀಕರಿಸಬಹುದು. ಹೊಸ ಕಾನೂನು ಮಾರ್ಚ್ 14 ರಿಂದ ಜಾರಿಗೆ ಬರಲಿದೆ.

error: Content is protected !! Not allowed copy content from janadhvani.com