ಅಬುಧಾಬಿ: ಯುಎಇಯಲ್ಲಿ ಮತ್ತೆ ಲಾಕ್ ಡೌನ್ ಬರಲಿದೆ ಎಂಬ ಪ್ರಚಾರವನ್ನು ಗೃಹ ಸಚಿವಾಲಯ ತಳ್ಳಿಹಾಕಿದೆ. ದಿನೇನೇ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಲಾಕ್‌ಡೌನ್ ವಿಧಿಸಲಾಗುವುದು ಎಂದು ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಪ್ರಚಾರವಾಗಿತ್ತು. ಲಾಕ್ ಡೌನ್ ಅನ್ನು ಮತ್ತೆ ವಿಧಿಸಲಾಗುವುದು ಎಂಬ ಪ್ರಚಾರವು ಆಧಾರರಹಿತವಾಗಿದೆ ಎಂದು ಗೃಹ ಸಚಿವಾಲಯ ಹೇಳಿದೆ.
ಇದನ್ನು ಸಂಬಂಧಪಟ್ಟ ಅಧಿಕಾರಿಗಳು ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ್ದಾರೆ. ಅಧಿಕೃತ ಮಾಧ್ಯಮ ವರದಿಗಳನ್ನು ಮಾತ್ರ ಪರಿಗಣಿಸಬೇಕೆಂದು ಗೃಹ ಸಚಿವಾಲಯ ಸೂಚಿಸಿದೆ. ಸುಳ್ಳು ಸುದ್ದಿ ವ್ಯಾಪಕವಾಗಿ ಹರಡುವುದರ ವಿರುದ್ಧವೂ ಸಚಿವಾಲಯ ಎಚ್ಚರಿಕೆ ನೀಡಿದೆ. ನಕಲಿ ಸುದ್ದಿ ಹರಡಿದವರಿಗೆ 20 ಸಾವಿರ ದಿರ್ಹಮ್ ದಂಡ ವಿಧಿಸಲಾಗುತ್ತದೆ. ಅದೇ ಸಮಯದಲ್ಲಿ, ಕೋವಿಡ್ ಪ್ರೋಟೋಕಾಲ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸಚಿವಾಲಯ ಜನರನ್ನು ಒತ್ತಾಯಿಸಿದೆ.