janadhvani

Kannada Online News Paper

ಎಸ್ಸೆಸ್ಸೆಫ್: ಇಂದು ಪ್ರತಿ ಮನೆಗಳಲ್ಲೂ ತಾಜುಲ್ ಫುಖಹಾಅ್ ಸಂಸ್ಮರಣೆ

ನಮ್ಮನ್ನಗಲಿದ ಉಡುಪಿ, ಹಾಸನ, ಶಿವಮೊಗ್ಗ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ, ಕೇಂದ್ರ ಮುಶಾವರ ಸದಸ್ಯ, ಕರ್ನಾಟಕ ಸುನ್ನಿ ಉಲಮಾ ಒಕ್ಕೂಟದ ಅಧ್ಯಕ್ಷ ಮರ್ಹೂಂ ತಾಜುಲ್ ಫುಖಹಾ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ರವರ ನಿಧನದ ಮೂರನೇ ದಿನವಾದ ಇಂದು ಪ್ರತಿ ಕಾರ್ಯಕರ್ತರ ಮನೆಗಳಲ್ಲಿ ದುಆ ಮಜ್ಲಿಸ್ ಮಾಡಲು ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ಕರೆ ನೀಡಿದೆ.

ಶೈಖುನಾ ಬೇಕಲ್ ಉಸ್ತಾದ್ ರವರ ವಿಯೋಗ ಮುಸ್ಲಿಂ ಕರ್ನಾಟಕಕ್ಕೆ ತುಂಬಲಾರದ ನಷ್ಟವಾಗಿದ್ದು ಸಮುದಾಯಕ್ಕೆ ಅವರ ಸೇವೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ಆದರ್ಶಗಳು ಇನ್ನೂ ಇಲ್ಲಿ ಜೀವಂತವಾಗಿದ್ದು ಅದನ್ನು ಪ್ರತಿ ಮನೆಗಳಿಗೂ ತಲುಪಿಸುವ ಕೆಲಸ ಇಲ್ಲಿ ನಡೆಯಬೇಕಾಗಿದೆ.

ಆದ್ದರಿಂದ ಇಂದು ಮಗ್ರಿಬ್ ಬಳಿಕ ಪ್ರತಿ ಕಾರ್ಯಕರ್ತರ ಮನೆಗಳಲ್ಲಿ ಮನೆಯವರೆಲ್ಲರೂ ಸೇರಿ ತಹ್ಲೀಲ್, ಯಾಸೀನ್ ಹಾಗೂ ಬೇಕಲ್ ಉಸ್ತಾದ್ ಸ್ಮರಣೆಯ ಮೂಲಕ ಸಂಸ್ಮರಣಾ ದಿನ ಆಚರಣೆ ಮಾಡಬೇಕಾಗಿದೆ ಎಂದು ಎಸ್ಸೆಸ್ಸೆಫ್ ರಾಜ್ಯ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.