ಎಸ್ಸೆಸ್ಸೆಫ್ ಕೊಣಾಜೆ ಸೆಕ್ಟರ್ ವತಿಯಿಂದ ನಡೆಸಿದ ಎಸ್ಸೆಸ್ಸೆಫ್ ದಕ ಜಿಲ್ಲಾ ಬ್ಲಡ್ ಸೈಬೋ ಇದರ 186ನೇ ರಕ್ತದಾನ ಶಿಬಿರ ಹಾಗೂ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಯೆನೆಪೋಯ ಆಸ್ಪತ್ರೆ ದೇರಳಕಟ್ಟೆ ಇವರ ಸಹಭಾಗಿತ್ವದಲ್ಲಿ
ಪಾವೂರು ಪಂಚಾಯತ್ ಬಳಿ ಇರುವ ಸಮುದಾಯ ಭವನ ಮಲಾರ್ ನಲ್ಲಿ ಜರುಗಿತು.
ಸೆಕ್ಟರ್ ವ್ಯಾಪ್ತಿಯ ಹನ್ನೆರಡು ಶಾಖೆಯ ಸದಸ್ಯರುಗಳು ಒಂದೆಡೆ ಎಡೆಬಿಡದೆ ಇರುವ ವಿಪರೀತ ಮಳೆಯನ್ನು ಲೆಕ್ಕಿಸದೆ ಕಾರ್ಯಕರ್ತರ ಆವೇಶವು ಕಾರ್ಯಕ್ರಮವನ್ನು ಯಶಸ್ವಿಯಾಗಿಸಿತು.
ಪದ್ಮಶ್ರೀ ಹರೇಕಳ ಹಾಜಬ್ಬ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಎಸ್ಸೆಸ್ಸೆಫ್ ನಡೆಸಿದ ಹಿಂದ್ ಸಫರ್ ನೆನಪಿಸಿ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಬ್ಲಡ್ ಸೈಬೋ ಚೇರ್ಮನ್ ತೌಸೀಫ್ ಸಅದಿ ಹರೇಕಳ ರಕ್ತದಾನ ಶಿಬಿರಕ್ಕೆ ನಮ್ಮ ಸಂಘಟನೆಯು ಮಾದರಿ ಎಂದರು.
ಕೊಣಾಜೆ ಸೆಕ್ಟರ್ ಅಧ್ಯಕ್ಷರಾದ ಉಸ್ಮಾನ್ ಪಜೀರ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬದ್ರುದ್ದೀನ್ ಸಖಾಫಿ ದುಆಗೈದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀಮಾನ್ ಯು.ಟಿ ಖಾದರ್ ಶಾಸಕರು ಮಂಗಳೂರು, ಎಸ್ಸೆಸ್ಸೆಫ್ ದಕ ಜಿಲ್ಲಾ ಅಧ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳ, ಜಿಲ್ಲಾ ಬ್ಲಡ್ ಸೈಬೋ ಕನ್ವೀನರ್ ಕರೀಂ ಕದ್ಕಾರ್. ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಮೋಹಮ್ಮದ್ ಮೋನು, ಪಾವೂರು ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷ ಫಿರೋಝ್, ಮುಡಿಪು ಡಿವಿಷನ್ ಕಾರ್ಯದರ್ಶಿ ನೌಫಲ್ ಫರೀದ್ ನಗರ,ಅಬೂಸ್ವಾಲಿ ಹರೇಕಳ, ಎಸ್ ಎಂ.ಎ ಅಧ್ಯಕ್ಷರಾದ ರಝಾಕ್ ಹಾಜಿ, ಸೆಕ್ಟರ್ ಬ್ಲಡ್ ಸೈಬೋ ಉಸ್ತುವಾರಿ ಮುನೀರ್ ಬೈತಾರ್, ಕೋಶಾಧಿಕಾರಿ ಫೈಝಲ್, ಎಸ್ ವೈ ಎಸ್ ಹರೇಕಳ ಸೆಂಟರ್ ಕಾರ್ಯದರ್ಶಿ ಮಜೀದ್ ಫರೀದ್ ನಗರ,ಎಂ.ಪಿ.ಹಸನ್, ಬಶೀರ್ ಮಲಾರ್,ಎಂ.ಕೆ. ಖಮರುದ್ದೀನ್, ರಿಯಾಝ್ ಗಾಡಿಗದ್ದೆ,ಎಂ.ಕೆ ಫಾರೂಖ್, ತಸ್ಲೀಂ ನಡುಗುಡ್ಡೆ ಮತ್ತಿತರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸೆಕ್ಟರ್ ಕಾರ್ಯದರ್ಶಿ ಉಬೈದುಲ್ಲಾಹ್ ಆರ್ ಜಿ ನಗರ ಸ್ವಾಗತಿಸಿ ನೌಫಲ್ ಮರ್ಝೂಖಿ ನಿರೂಪಿಸಿದರು.