janadhvani

Kannada Online News Paper

ಮಿಸ್ಬಾಹುಲ್ ಹುದಾ: ನಝೀರ್ ತಂಙಲ್ ಅಧ್ಯಕ್ಷರು, ಕೊಂಬಾಳಿ ಝುಹುರಿ ಕಾರ್ಯದರ್ಶಿ

ಮಂಗಳೂರು: ಮಾಣಿ ಇಬ್ರಾಹಿಂ ಸಅದಿ ಉಸ್ತಾದರ ಶಿಷ್ಯಂದಿರ ಸಂಘಟನೆಯಾದ ಮಿಸ್ಬಾಹುಲ್ ಹುದಾ ಸ್ಟೂಡೆಂಟ್ಸ್ ಅಸೋಸಿಯೇಷನ್ ವತಿಯಿಂದ ಆಧ್ಯಾತ್ಮಿಕ ಮಜ್ಲಿಸ್ ಹಾಗೂ ಪೂರ್ವ ವಿದ್ಯಾರ್ಥಿ ಸಂಗಮ ಕಾರ್ಯಕ್ರಮವು ಇತ್ತೀಚೆಗೆ ಮೋಂಟುಗೋಳಿ ಗೌಸಿಯಾ ಕಮ್ಯೂನಿಟಿ ಹಾಲ್ ಸಭಾಂಗಣದಲ್ಲಿ ನಡೆಯಿತು.

ಶೈಖುನಾ ಮಾಣಿ ಇಬ್ರಾಹಿಂ ಸಅದಿ ಉಸ್ತಾದರ ಸಭಾಧ್ಯಕ್ಷತೆಯಲ್ಲಿ ನಡೆದ ಸದ್ರಿ ಕಾರ್ಯಕ್ರಮವನ್ನು ಆದಂ ದಾರಿಮಿ ಬಂಡಾಡಿ ಉದ್ಘಾಟಿಸಿದರು. ಆಧ್ಯಾತ್ಮಿಕ ಮಜ್ಲಿಸಿನ ನೇತೃತ್ವವನ್ನು ಅಸ್ಸಯ್ಯಿದ್ ಮುಹಮ್ಮದ್ ನಝೀರ್ ತಂಙಲ್ ಅಲ್-ಬುಖಾರಿ ಉಪ್ಪಳ ವಹಿಸಿದರು. ಬಳಿಕ ನಡೆದ ಪೂರ್ವ ವಿದ್ಯಾರ್ಥಿ ಸಂಗಮದಲ್ಲಿ ಮಿಸ್ಬಾಹುಲ್ ಹುದಾ ಸಂಘಟನೆಯನ್ನು ಪುನರ್ರಚನೆ ಮಾಡಲಾಯಿತು.

ಗೌರವ ಸಲಹೆಗಾರರಾಗಿ ಶೈಖುನಾ ಮಾಣಿ ಇಬ್ರಾಹಿಂ ಸಅದಿ ಉಸ್ತಾದ್, ಅಧ್ಯಕ್ಷರಾಗಿ ಅಸ್ಸಯ್ಯಿದ್ ಮುಹಮ್ಮದ್ ನಝೀರ್ ತಂಙಲ್ ಅಲ್-ಬುಖಾರಿ ಉಪ್ಪಳ, ಪ್ರಧಾನ ಕಾರ್ಯದರ್ಶಿಯಾಗಿ ಕೊಂಬಾಳಿ ಕೆ.ಎಂ.ಎಚ್ ಝುಹುರಿ, ಕೋಶಾಧಿಕಾರಿಯಾಗಿ ಉಮರುಲ್ ಫಾರೂಖ್ ಮದನಿ ಸಂಪ್ಯ ಸಂಘಟನಾ ಕಾರ್ಯದರ್ಶಿಯಾಗಿ ಖಲಂದರ್ ಶಾಫಿ ಕೋಡಿಂಬಾಳ, ಮೀಡಿಯ ಕನ್ವೀನರಾಗಿ ಸಲೀಂ ಮಿಸ್ಬಾಹಿ ಕನ್ಯಾನ, ಉಪಾಧ್ಯಕ್ಷರುಗಳಾಗಿ ಮುಹಮ್ಮದ್ ಅಶ್ರಫ್ ಸಖಾಫಿ ಸಂಪ್ಯ, ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರು, ಆದಂ ದಾರಿಮಿ ಬಂಡಾಡಿ, ಅಯ್ಯೂಬ್ ಮುಸ್ಲಿಯಾರ್ ಮರ್ದಾಳ, ಕಾರ್ಯದರ್ಶಿಗಳಾಗಿ ಮುಹಮ್ಮದ್ ರಫೀಖ್ ಸಅದಿ ಮಿತ್ತೂರು, ಇಬ್ರಾಹಿಂ ಸಖಾಫಿ ಕಬಕ, ಮುಹಮ್ಮದ್ ಹನೀಫ್ ಸಅದಿ ಮಂಗಳಪದವು, ಸಿ. ಕೆ. ಮುಹಮ್ಮದ್ ದಾರಿಮಿ ಮಾಡನ್ನೂರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಉಸ್ತಾದರ ಎಲ್ಲಾ ಶಿಷ್ಯಂದಿರನ್ನು ಆಯ್ಕೆ ಮಾಡಲಾಯಿತು.

ಪ್ರಸ್ತುತ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಖ್ಫ್ ಅಧಿಕಾರಿ ಅಬೂಬಕರ್ ಹಾಜಿ ಮೋಂಟುಗೋಳಿ, ದಾರುನ್ನಜಾತ್ ಸಂಸ್ಥೆಯ ಚಯರ್ಮಾನ್ ಅಬ್ದುಲ್ ಖಾದರ್ ಸಖಾಫಿ, ಮೋಂಟುಗೋಳಿ ಗೌಸಿಯಾ ಜುಮಾ ಮಸೀದಿಯ ಅಧ್ಯಕ್ಷರಾದ ಸುಲೈಮಾನ್, ಕೋಶಾಧಿಕಾರಿಯಾದ ಇಬ್ರಾಹಿಂ ಹಾಜಿ, ಲೆಕ್ಕ ಪರಿಶೋಧಕರಾದ ಕೆ.ಪಿ.ಅಬೂಬಕರ್ ಹಾಜಿ, ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಝಕರಿಯಾ, ಜಮಾಅತ್ ಹಿರಿಯರಾದ ಹೈದರ್ ಹಾಜಿ ಶಾಮಿಯಾನ, ಮೂಸ, ಮದ್ರಸ ಮುಖ್ಯೋಪಾಧ್ಯಾಯರಾದ ಅಬ್ದುಲ್ ಖಾದರ್ ಮುಸ್ಲಿಯಾರ್ ಮಂಜನಾಡಿ, ಅಧ್ಯಾಪಕರಾದ ಹೈದರ್ ಲತೀಫಿ ಮೆದು ಮೊದಲಾದವರು ಉಪಸ್ಥಿತರಿದ್ದರು.

ಮುಹಮ್ಮದ್ ಅಶ್ರಫ್ ಸಖಾಫಿ ಸಂಪ್ಯ ಸ್ವಾಗತಿಸಿ, ಕಾರ್ಯದರ್ಶಿ ಕೊಂಬಾಳಿ ಝುಹುರಿ ವಂದಿಸಿದರು.