janadhvani

Kannada Online News Paper

ಎಸ್ಸೆಸ್ಸೆಫ್ ಇಳಂತಿಲ ಮುರ ಶಾಖೆ ವತಿಯಿಂದ ಧ್ವಜ‌ ದಿನಾಚರಣೆ

ಇಳಂತಿಲ ಮುರ: ಎಸ್ಸೆಸ್ಸೆಫ್ ಇಳಂತಿಲ ಮುರ ಶಾಖೆ ವತಿಯಿಂದ ಎಸ್ಸೆಸ್ಸೆಫ್ 31ನೇ ಧ್ವಜ‌ ದಿನಾಚರಣೆಯನ್ನು ಹಾಗೂ ಎಸ್ಸೆಸ್ಸೆಫ್ ಟೀ ಶರ್ಟ್ ವಿತರಣೆ ಮಾಡಲಾಯಿತು.

ಕಾರ್ಯಕ್ರಮವು ಶಾಖಾ ಅಧ್ಯಕ್ಷರು ನೌಶಾದ್ ಸಖಾಫಿಯ ಅಧ್ಯಕ್ಷತೆಯಲ್ಲಿ ಜರುಗಿತು. ಕಾರ್ಯದರ್ಶಿ ಮುಝಮ್ಮಿಲ್ ರವರು ಸ್ವಾಗತ ಮಾಡಿದರು.ಜಮಾಅತ್ ಅಧ್ಯಕ್ಷರು NNB ಇಬ್ರಾಹಿಂ ರವರು ಧ್ವಜಾರೋಹಣ ಕಾರ್ಯನಿರ್ವಹಿಸಿದರು‌.

ಕಾರ್ಯ ಕ್ರಮದ ಮೊದಲು ಸ್ಥಳಿಯ‌ ಸದರ್ ಉಸ್ತಾದ್ ಅಶ್ರಫ್ ಝೈನಿಯವರ ಪ್ರಾರ್ಥನೆಗೆ ನೇತೃತ್ವ ನೀಡಿದರು. ಊರಿನ ಹಿರಿಯ ಸಂಘಟನೆ ನಾಯಕರಾದ ರಫೀಖ್ ಸಖಾಫಿ,ಸಮದ್ ಸಖಾಫಿ ಹಿತ ವಚನ ನೀಡಿದರು. ಕಾರ್ಯಕ್ರಮದಲ್ಲಿ ಅಹ್ಮದ್ ಅಲಿ ಸ‌ಅದಿ,ಹಾಗೂ ಎಸ್.ವೈ ಎಸ್ ಅಧ್ಯಕ್ಷರು ಇಸ್ಮಾಯಿಲ್ ಹಾಜಿಯವರ ಗಣ್ಯ ಉಪಸ್ಥಿತಿಯು ಹಾಗೂ.ಎಸ್.ಬಿ.ಯಸ್ ಎಸ್.ಎಸ್.ಎಫ್, ಎಸ್.ವೈ.ಎಸ್ ಕಾರ್ಯಕರ್ತರೆಲ್ಲಾರು ಈ ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದರು.