janadhvani

Kannada Online News Paper

ಎಸ್ಕೆಎಸ್ಸೆಸ್ಸೆಫ್ ಮಲ್ಲಿಗೆ ಮಜಲು ವತಿಯಿಂದ ಮಸೀದಿಯ ರಸ್ತೆ ದುರಸ್ತಿ

ನೆಲ್ಯಾಡಿ: ಎಸ್ಕೆಎಸ್ಸೆಸ್ಸೆಫ್ ಮಲ್ಲಿಗೆ ಮಜಲು ಶಾಖೆ ವತಿಯಿಂದ ಸ್ವಚ್ಛತಾ ಹಾಗೂ ಮಸೀದಿಗೆ ಬರುವಂತಹ ರಸ್ತೆ ದುರಸ್ತಿ ಕೆಲಸ ಮಾಡಲಾಯಿತು.

ಎಸ್ಕೆಎಸ್ಸೆಸ್ಸೆಫ್ ಶಾಖೆ ಅಧ್ಯಕ್ಷರಾದ ಹೈದರ್ ಮಲ್ಲಿಗೆ, ಕಾರ್ಯದರ್ಶಿ ಕರೀಂ ಬೈಲಂಗಡಿ, ಕೋಲ್ಪೆ ಕ್ಲಸ್ಟರ್ ಅಧ್ಯಕ್ಷರಾದ ಯೂಸುಫ್ ಬೈಲಂಗಡಿ, ವಿಕಾಯ ಕನ್ವೀನರ್ ಅಬೂಬಕ್ಕರ್ ಎಂ ಬೈಲಂಗಡಿ ಪಾಲ್ಗೊಂಡಿದ್ದರು.

ಮಸೀದಿ ಅಧ್ಯಕ್ಷರಾದ ಕಾದರ್ ಎಂಎಚ್, ಉಪಾಧ್ಯಕ್ಷರಾದ ಅಶ್ರಫ್ ಬೈಲಂಗಡಿ, ಸ್ವಲಾತ್ ಕಮಿಟಿ ಅಧ್ಯಕ್ಷರಾದ ಇಬ್ರಾಹಿಂ ಸಿಎಂ, ಸಂಘಟನಾ ಕಾರ್ಯದರ್ಶಿ ಬಶೀರ್ ಬೈಲಂಗಡಿ, ಸದಸ್ಯರಾದ ಮಾಜಿ ಕಾರ್ಯದರ್ಶಿ ಅಶ್ರಫ್ ಎಂಎಚ್ ರಹಿಂ ಬೈಲಂಗಡಿ, ಸಮೀರ್ ಬೈಲಂಗಡಿ, ಉಮ್ಮರ್ ಬೈಲಂಗಡಿ ಆಡಳಿತ ಕಮಿಟಿ ಸಲಹೆಗಾರರಾದ ಇಬ್ರಾಹಿಂ ಸುಪಾರಿ ಹಾಗೂ ಇನ್ನಿತರ ಸದಸ್ಯರುಗಳು ಭಾಗವಹಿಸಿದರು.