janadhvani

Kannada Online News Paper

ಸ್ಥಳೀಯ ವ್ಯಕ್ತಿಗೆ ಹಣ ನೀಡಿ ನೇಪಾಳಿಯಂತೆ ನಟಿಸಲು ಹೇಳಿದ ವಿಶ್ವ ಹಿಂದೂ ಸೇನಾ

ವಾರಣಾಸಿ: ಮಾಧ್ಯಮಗಳಲ್ಲಿ ಸುದ್ದೀಗೀಡಾದ ನೇಪಾಳಿ ಯುವಕನ ತಲೆ ಬೋಳಿಸಿ ಜೈ ಶ್ರೀ ರಾಂ ಘೋಷಣೆ ಕೂಗಿದ ಘಟನೆಯ ಸತ್ಯಾಸತ್ಯತೆ ಇದೀಗ ಹೊರಬಂದಿದ್ದು ಈತ ನೇಪಾಳಿಯಾಗಿರದೆ ವಾರಣಾಸಿಯ ಸ್ಥಳೀಯ ನಿವಾಸಿಯಾಗಿದ್ದಾನೆ ಈತನಿಗೆ ವಿಶ್ವ ಹಿಂದೂ ಸೇನಾ 1000 ರೂಪಾಯಿ ನೀಡಿ ವೀಡಿಯೋ ಚಿತ್ರೀಕರಿಸಿದ್ದಾಗಿ ಪೊಲೀಸರು ಬಹಿರಂಗಪಡಿಸಿದ್ದಾರೆ.

ಸಂಘಟನೆಯ ಸಂಚಾಲಕ ಅರುಣ್ ಪಾಠಕ್ ಎಂಬಾತ ಈ ವೀಡಿಯೊವನ್ನು ಜುಲೈ 16 ಕ್ಕೆ ತನ್ನ ಫೇಸ್ಬುಕ್ ಖಾತೆಯಲ್ಲಿ ಪ್ರಸಾರ ಮಾಡಿದ್ದು ಈ ವೀಡಿಯೊವನ್ನು ವಾರಣಾಸಿಯ ಬೆಲುಪುರದ ಸಮೀಪದ ಗಂಗಾ ನದಿಯ ದಂಡೆಯಲ್ಲಿ ಚಿತ್ರರೀಕರಿಸಲಾಗಿತ್ತು. ಈ ಘಟನೆ ಮಾಧ್ಯಮಗಳಲ್ಲಿ ವರದಿಯಾದ ಬಳಿಕ ನೇಪಾಳಿ ರಾಯಭಾರಿ ಯು ಪಿ ಮುಖ್ಯಮಂತ್ರಿಯವರನ್ನು ಫೋನ್ ಮೂಲಕ ಸಂಪರ್ಕಿಸಿ ಮಾಹಿತಿ ಪಡೆದುಕೊಂಡಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು.