ಪುತ್ತೂರು: ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬೆಳ್ತಂಗಡಿ ತಾಲೂಕಿನ ವ್ಯಕ್ತಿಯೊಬ್ಬರು ಉಸಿರಾಟದ ತೊಂದರೆಯಿಂದ ಜು. 17ರಂದು ಮೃತಪಟ್ಟಿದ್ದು, ಮೃತಪಟ್ಟ ವ್ಯಕ್ತಿಯ ಕೊರೋನಾ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿತ್ತು.ಈ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ಮಾರ್ಗಸೂಚಿ ಪ್ರಕಾರ ಕಳೆಂಜಿಬೈಲು ಜುಮಾ ಮಸೀದಿಯ ದಫನ ಭೂಮಿಯಲ್ಲಿ ಧಾರ್ಮಿಕ ವಿಧಿವಿಧಾನಗಳ ಪ್ರತ್ಯೇಕ ತರಬೇತಿ ಪಡೆದ ದ.ಕ ಜಿಲ್ಲಾ ಎಸ್ಸೆಸ್ಸೆಫ್ ತುರ್ತು ಸೇವಾ ತಂಡ ಅಂತ್ಯಕ್ರಿಯೆ ನಡೆಸಿತು.
ದ.ಕ ಜಿಲ್ಲಾ ಎಸ್ಸೆಸ್ಸೆಫ್ ನಾಯಕರಾದ ಎಂ.ಎಂ ಫೈಝಲ್ ಝುಹ್ರಿ, ನವಾಝ್ ಸಖಾಫಿ ಅಡ್ಯಾರ್, ಜಿಲ್ಲಾ ಕೋಶಾಧಿಕಾರಿ ಮುಹಮ್ಮದ್ ಅಲಿ ತುರ್ಕಳಿಕೆ, ಎಸ್ ವೈ ಎಸ್ ನಾಯಕರಾದ ಇಕ್ಬಾಲ್ ಬಪ್ಪಳಿಗೆ, ಸ್ವಾಲಿಹ್ ಮುರ,ಸಂಶುದ್ದೀನ್ ಬೆಳ್ಳಾರೆ, ಎಸ್ಸೆಸ್ಸೆಫ್ ಈಸ್ಟ್ ಝೋನ್ ಬ್ಲಡ್ ಉಸ್ತುವಾರಿ ಸಿದ್ದೀಕ್ ಗೂನಡ್ಕ ,ರಫೀಕ್ ಸಖಾಫಿ ಬಳ್ಳಾರಿ, ಪುತ್ತೂರು ಡಿವಿಷನ್ ಬ್ಲಡ್ ಉಸ್ತುವಾರಿ ಹಾರಿಸ್ ಅಡ್ಕ ,ಜಿಲ್ಲಾ ಸದಸ್ಯರಾದ ಹಕೀಂ ಕಳಂಜಿಬೈಲ್,ಮುಸ್ತಫಾ ಉರುವಾಲುಪದವು, ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
ಎಂ.ಜೆ.ಎಂ ಆಡಳಿತ ಸಮಿತಿ ಕಳೆಂಜಿಬೈಲು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ಸ್ಥಳಿಯ ಎಸ್ಸೆಸ್ಸೆಫ್ ಶಾಖಾ ಕಾರ್ಯಕರ್ತರ ಸಹಕಾರದೊಂದಿಗೆ ಯಶಸ್ವಿಯಾಗಿ ನೆರವೇರಿಸಲಾಯಿತು.