janadhvani

Kannada Online News Paper

ಪಿಯುಸಿ: ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಉಜಿರೆಯ ಮುಹಮ್ಮದ್ ನಿಶ್ವಾನ್

ಉಜಿರೆ: ಇಲ್ಲಿನ ಎಸ್ ಡಿ ಎಂ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿ ಮುಹಮ್ಮದ್ ನಿಶ್ವಾನ್, ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗ ಪರೀಕ್ಷೆಯಲ್ಲಿ 564 (94%) ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡು, ಕಾಲೇಜಿಗೆ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿರುತ್ತಾರೆ.

ಬಿಇಎಸ್ ನಲ್ಲಿ385 ಅಂಕಗಳನ್ನು ಪಡೆದು 96.25% ಫಲಿತಾಂಶವನ್ನು ಗಳಿಸಿದ್ದಾರೆ.

ಇವರು ಉಜಿರೆ ಗಾಂಧಿ ನಗರ ನಿವಾಸಿಯಾದ ಕೆ. ಎಚ್. ಉಸ್ಮಾನ್ ಹಾಗೂ ನಫೀಸಾ ಶೀಬಾ ದಂಪತಿಗಳ ಏಕೈಕ ಪುತ್ರ.

ಮಗನ ಸಾಧನೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಹೆತ್ತವರು, ಮುಂದಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಉನ್ನತ ಹುದ್ದೆ ಅಲಂಕರಿಸುವ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದಾರೆ.