ದುಬೈ: ಜುಲೈ 7 ರಿಂದ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರವಾಸಿಗರನ್ನು ಸ್ವಾಗತಿಸಲು ಸಜ್ಜಾಗಿದೆ. ಜೂನ್ 22 ರಂದೆ ದುಬೈ ಸರಕಾರ ಈ ಬಗ್ಗೆ ಸೂಚನೆ ನೀಡಿದ್ದು ಅದೀಗ ನಾಳೆಯಿಂದ ಕಾರ್ಯರೂಪಕ್ಕೆ ಬರಲಿದೆ.
ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಪ್ರತಿಯೊಬ್ಬ ಪ್ರಯಾಣಿಕನೂ ಕನಿಷ್ಠ 2 ಮೀಟರ್ ಅಂತರ ಪಾಲಿಸಬೇಕಿದ್ದು ಫೇಸ್ ಮಾಸ್ಕ್, ಕೈಗವಸು ಗಳು ಕಡ್ಡಾಯವಾಗಿದೆ. ವಿಶ್ರಾಂತಿ ವಲಯಗಳಲ್ಲಿ ಒಂದು ಆಸನ ಬಿಟ್ಟು ಕುಳಿತುಕೊಳ್ಳಬೇಕಿದೆ. ಪ್ರವಾಸಿಗರು ದುಬೈ ಸಂದರ್ಶನಕ್ಕೆ ಕನಿಷ್ಠ 96 ಗಂಟೆಗಳ ಮುಂಚೆ ಪಡೆದ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಹೊಂದುವುದು ಕಡ್ಡಾಯವಾಗಿರುತ್ತದೆ ಅಥವಾ ವಿಮಾನ ನಿಲ್ದಾಣದಲ್ಲೇ ಪಿಸಿಆರ್ ಟೆಸ್ಟ್ ಮಾಡಬಹುದಾಗಿದೆ.