ಅಬುಧಾಬಿ : ಕೇರಳ ಮುಸ್ಲಿಂ ಕಲ್ಚರಲ್ ಸೆಂಟರ್ (KMCC) ಯ ಅಧೀನದಲ್ಲಿ ನಿಗದಿಗೊಳಿಸಿದ ಚಾರ್ಟೆಡ್ ವಿಮಾನಕ್ಕೆ ಕೊನೆಯ ಕ್ಷಣದಲ್ಲಿ ಡಿಜಿಸಿಎ ಅನುಮತಿ ನಿರಾಕರಿಸಿದ ಘಟನೆ ನಡೆದಿದೆ.
ಅಬುಧಾಬಿಯಿಂದ ಕೋಝಿಕೋಡ್ ಗೆ ಇತ್ತಿಹಾದ್ ಏರ್ವೇಸ್ (EY 254) ಇಂದು ಮಧ್ಯಾಹ್ನ 2.20 ಕ್ಕೆ 183 ಪ್ರಯಾಣಿಕರೊಂದಿಗೆ ಪ್ರಯಾಣ ನಡೆಸಬೇಕಿತ್ತು ಆದರೆ ಕೊನೆಯ ಕೆಲವಷ್ಟೇ ತಾಸುಗಳು ಬಾಕಿ ಇರುವಾಗ ಈ ಪ್ರಯಾಣವನ್ನು ಮೊಟಕುಗೊಳಿಸಲಾಗಿದೆ ಎಂಬ ಮಾಹಿತಿ KMCC ಕಾರ್ಯಕರ್ತರಿಗೆ ಲಭಿಸಿದ್ದು ಇದರೊಂದಿಗೆ ವಿಮಾನ ನಿಲ್ದಾಣದಲ್ಲಿ ಗೊಂದಲದ ವಾತಾವರಣ ಏರ್ಪಟ್ಟಿತು.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ KMCC ಅಬುಧಾಬಿ ಯ ಅಧ್ಯಕ್ಷ ಶುಕೂರ್ ಅಲಿ ಡಿಜಿಸಿಎ ಎಲ್ಲಾ ಪ್ರಯಾಣಗಳ ಕೆಲವು ತಾಸುಗಳ ಮೊದಲಷ್ಟೇ ಅನುಮತಿ ನೀಡುತ್ತಿದ್ದು ನಾವು ಎಲ್ಲಾ ರೀತಿಯ ತಯಾರಿ ನಡೆಸಿದ್ದೆವು ಕೇರಳ ಸರಕಾರದ ಎಲ್ಲಾ ರೀತಿಯ ಅನುಮತಿಯೂ ಲಭಿಸಿತ್ತು ಆದರೂ ವಿಮಾನ ರದ್ದು ಮಾಡಲಪಟ್ಟಿದ್ದು ಯಾವ ಕಾರಣಕ್ಕೆ ಎಂದು ತಿಳಿದು ಬಂದಿಲ್ಲ ಎಂದು ಹೇಳಿದರು. ಅದೇ ರೀತಿ ಶಾರ್ಜಾ ದಿಂದ ಮಧುರೈ ಗೆ ಪ್ರಯಾಣ ಬೆಳಸಬೇಕಿದ್ದ ಇನ್ನೊಂದು ವಿಮಾನಕ್ಕೂ ಅನುಮತಿ ಲಭಿಸದೆ ಆ ಪ್ರಯಾಣವೂ ರದ್ದಾಗಿದೆ ಅದರಲ್ಲಿ 168 ಪ್ರಯಾಣಿಕರು ಪ್ರಯಾಣಿಸಬೇಕಿತ್ತು ಅದನ್ನೂ KMCC ಚಾರ್ಟ್ ಮಾಡಿತ್ತು.