ನವದೆಹಲಿ: ಚೀನಾ ಮತ್ತು ಭಾರತ ನಡುವೆ ಗಡಿ ಗದ್ದಲ ಮುಂದುವರೆದಿರುವಂತೆಯೇ ಚೀನಾಕ್ಕೆ ಕೆಂದ್ರ ಸರಕಾರ ದೊಡ್ಡದೊಂದು ಶಾಕ್ ನೀಡಿದೆ.
ಭಾರತದ ಮೊಬೈಲ್ ಬಳಕೆದಾರರ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ ಮತ್ತು ಖಾಸಗಿತನಕ್ಕೆ ಅಪಾಯ ಉಂಟುಮಾಡುತ್ತಿದೆ ಎಂಬ ಕಾರಣದಿಂದ ಚೀನಾ ಮೂಲದ 59 ಮೊಬೈಲ್ ಅಪ್ಲಿಕೇಷನ್ ಗಳನ್ನು ಕೇಂದ್ರ ಸರಕಾರ ನಿಷೇಧಿಸಿ ಇಂದು ಆದೇಶ ಹೊರಡಿಸಿದೆ.
ದೇಶಾದ್ಯಂತ ಯುವಜನರಲ್ಲಿ ಹೊಸ ಕ್ರೇಝ್ ಹುಟ್ಟುಹಾಕಿದ್ದ ವಿಡಿಯೋ ಶೇರಿಂಗ್ ಆ್ಯಪ್ ಆಗಿರುವ ಟಿಕ್ ಟಾಕ್ ಸಹ ಈ ನಿಷೇಧಿತ ಆ್ಯಪ್ ಗಳ ಪಟ್ಟಿಯಲ್ಲಿ ಸೇರಿಕೊಂಡಿದೆ.
2020ರ ಎಪ್ರಿಲ್ ಹೊತ್ತಿಗೆ ವಿಶ್ವಾದ್ಯಂತ ಟಿಕ್ ಟಾಕ್ ಬಳಕೆದಾರರ ಸಂಖ್ಯೆ 1.5 ಬಿಲಿಯನ್ ಮುಟ್ಟಿತ್ತು ಮತ್ತು ಭಾರತದಲ್ಲೇ ಈ ಆ್ಯಪ್ 611 ಮಿಲಿಯನ್ ಡೌನ್ಲೋಡ್ ಕಂಡಿತ್ತು. ಅದರಲ್ಲೂ ಕೋವಿಡ್ ಸಂಬಂಧಿತ ಲಾಕ್ ಡೌನ್ ಕಾಲದಲ್ಲಿ ಭಾರತೀಯರು ಟಿಕ್ ಟಾಕ್ ಬಳಕೆಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದ್ದರು.
ಕೇಂದ್ರ ಸರಕಾರ ನಿಷೇಧಿಸಿರುವ ಪ್ರಮುಖ ಚೈನೀಸ್ ಅಪ್ಲಿಕೇಷನ್ ಗಳ ಪಟ್ಟಿ ಈ ರೀತಿಯಾಗಿದೆ:
ಟಿಕ್ ಟಾಕ್
ಶೇರ್ ಇಟ್
ಯುಸಿ ಬ್ರೌಸರ್
ಬೈಡು ಮ್ಯಾಪ್
ಕ್ಲ್ಯಾಷ್ ಆಫ್ ಕಿಂಗ್ಸ್
ಡಿಯು ಬ್ಯಾಟರಿ ಸೇವರ್
ಹೆಲೋ
ಲೈಕೀ
ಯೂ ಕ್ಯಾನ್ ಮೇಕಪ್
ಎಂ.ಐ. ಕಮ್ಯುನಿಟಿ
ವೈರಸ್ ಕ್ಲೀನರ್
ಕ್ಲಬ್ ಫ್ಯಾಕ್ಟರಿ
ನ್ಯೂಸ್ ಡಾಗ್
ವಿ ಚಾಟ್
ಯುಸಿ ನ್ಯೂಸ್
ಕ್ಯುಕ್ಯು ಮೇಲ್
ಕ್ಯುಕ್ಯು ಮ್ಯೂಸಿಕ್
ಬಿಗೋ ಲೈವ್
ಸೆಲ್ಫೀ ಸಿಟಿ
ಮೈಲ್ ಮಾಸ್ಟರ್
ಮಿ ವಿಡಿಯೋ ಕಾಲ್ ಕ್ಸಿಯೋಮಿ
ವಿ ಸಿಂಕ್
ವಿಗೋ ವಿಡಿಯೋ
ಡಿಯು ರೆಕಾರ್ಡರ್
ಡಿಯು ಬ್ರೌಸರ್
ಕ್ಯಾಮ್ ಸ್ಕ್ಯಾನರ್
ಕ್ಲೀನ್ ಮಾಸ್ಟರ್ ಚೀತಾ ಮೊಬೈಲ್
ವಂಡರ್ ಕೆಮರಾ
ಫೊಟೋ ವಂಡರ್
ಸ್ವೀಟ್ ಸೆಲ್ಫೀ
ಕ್ಸೆಂಡರ್
ಕ್ವಾಯ್