janadhvani

Kannada Online News Paper

ನ್ಯೂಸ್ ಪೋರ್ಟಲ್ ನಲ್ಲಿ ಸುಳ್ಳು ಸುದ್ದಿ: ದುಬೈನಿಂದ ಬಂದವರು ಕ್ವಾರಂಟೈನ್ ನಲ್ಲೇ ಇದ್ದಾರೆ

✍🏻Nizzu4ever👁️
ಉರುವಾಲು ಪದವು

ಸಂವಿಧಾನದ ನಾಲ್ಕನೇ ಅಂಗವಾದ ಮಾಧ್ಯಮಗಳ ಬಗ್ಗೆ ಜನರು ಇಂದು ನಂಬಿಕೆ ಕಳೆದುಕೊಳ್ಳುತ್ತಿರುವುದು ಇದೇ ಕಾರಣಕ್ಕೆ. ಕೇವಲ ಸುಳ್ಳು ಮಾಹಿತಿಗಳನ್ನು ಪ್ರಕಟಿಸಿ ಜನರಲ್ಲಿ ಭೀತಿ ಸೃಷ್ಟಿಸಿ ಗೊಂದಲವನ್ನು ಸೃಷ್ಟಿಸುವಂತಹ ಮಾಧ್ಯಮಗಳು ಯಾವ ರೀತಿ ಪತ್ರಿಕಾ ಧರ್ಮವನ್ನು ಕಾಪಾಡುತ್ತಿದೆ ಎಂಬುವು ಯಕ್ಷ ಪ್ರಶ್ನೆ. ಬೆಳಿಗ್ಗೆ ಎದ್ದರೆ ಫೇಕ್ ನ್ಯೂಸ್ ಹಿಂದೆ ಬಿದ್ದು ಜನರನ್ನು ತಪ್ಪು ದಾರಿಗೆಳೆಯುತ್ತಿರುವ ಇಂತಹ ಮಾಧ್ಯಮಗಳು ಕೊರೋಣದಿಂದ ಭಯಭೀತರಾಗಿ ದಿನಕಳೆಯುತ್ತಿರುವ ಜನರಿಗೆ ಮಾನಸಿಕವಾಗಿ ಇನ್ನಷ್ಟು ತೊಂದರೆಗಳನ್ನು ನೀಡಿ ಹಿಂಸೆ ನೀಡುತ್ತಿದೆ. ಯಾವುದೇ ಅಧಿಕೃತ ವರದಿಯನ್ನು ಪ್ರಕಟಿಸದೆ ಬಿಟ್ಟಿ ಪ್ರಚಾರಕ್ಕೆ ತನ್ನತನವನ್ನು ಮಾರಿಕೊಳ್ಳುತ್ತಿರುವ ಪತ್ರಿಕೆಗಳನ್ನು ಇಂದಿನ ಬಲುದೊಡ್ಡ ಭಯೊತ್ಪಾದನೆಯಾಗಿ ಪರಿಚಯಿಸಬಹುದು.

ದುಬೈಯಿಂದ ಕಣ್ಣೂರಿಗೆ ಬಂದ ಪ್ರಯಾಣಿಕರು ಕ್ವಾರೈಂಟೇನ್ ನಿಂದ ತಪ್ಪಿಸಿಕೊಂಡಿದ್ದಾರೆ ಎಂದು ಸುಳ್ಳು ವರದಿಯನ್ನು ಪ್ರಕಟಿಸಿದ್ದಲ್ಲದೆ ಕೆಲವು ಸಂಖ್ಯೆಗಳನ್ನೂ ನೀಡಿದೆ. ಶನಿವಾರ ದುಬೈಯಿಂದ ಬಂದ ಪ್ರಯಾಣದಲ್ಲಿ ಒಟ್ಟು 186 ಪ್ರಯಾಣಿಕರಿದ್ದು ಅದರಲ್ಲಿ 150 ಮಂದಿ ಕೆಸಿಎಫ್ ವತಿಯಿಂದ ಹಾಗೂ 36 ಮಂದಿ ಪ್ರಯಾಣಿಕರು ಕೇರಳದವರಾಗಿದ್ದಾರೆ. ನ್ಯೂಸ್ ಪೋರ್ಟಲ್ ತಿಳಿಸಿದ 33 ಮಂದಿ ಕೇರಳದವರು. ಅವರನ್ನು ಕರ್ನಾಟಕದಲ್ಲಿ ಕ್ವಾರೈಂಟೇನ್ ಮಾಡಿಸಬೇಕೇ?

ತಪ್ಪಿಸಿಕೊಂಡವರು ಕೊಡಗಿನ ಇಪ್ಪತ್ತು ಮಂದಿ ಎಂದು ಹೇಳಿದ್ದು ಹೇಗೆ. ನಮ್ಮ ಯಾತ್ರೆಯಲ್ಲಿ ಕೇವಲ ಆರು ಮಂದಿ ಮಾತ್ರ ಕೊಡಗಿನವರಿದ್ದರು.ಅವರೆಲ್ಲರೂ ಮಂಗಳೂರಿನ ಕ್ವಾರೈಂಟೇನ್ ನಲ್ಲಿದ್ದಾರೆ. ಮತ್ತೆ ಇಪ್ಪತ್ತು ಮಂದಿ ಎಲ್ಲಿಂದ ತಪ್ಪಿಸಿಕೊಂಡರು. ಸುಳ್ಳು ಹೇಳುವುದಕ್ಕೂ ಮಿತಿ ಬೇಡವೇ?

ಉಡುಪಿ ಮೂಲದ ಸಲೀಂ, ಹುಸೈನ್ ಅಲಿ ಮತ್ತು ರಾಕೇಶ್ ಎಂಬ ಮೂರು ಮಂದಿ ಪ್ರಯಾಣಿಕರು ಸೇವಾ ಸಿಂಧು ರಿಜಿಸ್ಟರ್ ಮಾಡಿ ಕಾನೂನಾತ್ಮಕವಾಗಿ ತಲಪಾಡಿ ಗೇಟ್ ಬಳಿ ತಮ್ಮ ಎಲ್ಲಾ ರೀತಿಯ ಮಾಹಿತಿಯನ್ನು ನೀಡಿ ಗಾಡಿ ನಂಬರ್ ಕೊಟ್ಟು ಉಡುಪಿಯ ಕೃಷ್ಣ ಮಠದ ಹತ್ತಿರ ಇರುವ ಮಧುರಾ ಕಂಫರ್ಟ್ ಹೋಟಲ್ ನಲ್ಲಿ 14 ದಿವಸಗಳ ಕ್ವಾರೈಂಟೈನ್ ಮಾಡಿದ್ದಾರೆ. ಲೋಕೇಶ್ ಎಂಬ ಪ್ರಯಾಣಿಕ ದೇರಳಕಟ್ಟೆಯ ಪ್ಲಾಝಾ ಅವೆನ್ಯೂ ಹೋಟೆಲ್ ನಲ್ಲಿ ಕ್ವಾರೈಂಟೈನ್ ನಲ್ಲಿದ್ದಾರೆ.

ಒಟ್ಟು 147 ಪ್ರಯಾಣಿಕರು ಮಂಗಳೂರಿನ ಏಳು ವಿವಿಧ ಹೋಟೆಲ್ ಗಳಲ್ಲಿ ಕ್ವಾರೈಂಟೈನ್ ನಲ್ಲಿದ್ದು 2 ಮಂದಿ ಕೇರಳದ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದು ಒಬ್ಬರು ಉಳ್ಳಾಲದವರಾಗಿದ್ದರೂ ಅಲ್ಲಿ ಸೀಲ್ ಡೌನ್ ಆಗಿರುವ ಕಾರಣ ಮಂಜೇಶ್ವರದಲ್ಲಿ ತನ್ನ ತಾಯಿ ಮನೆಯಲ್ಲಿ ಕ್ವಾರಂಟಿನ್ ನಲ್ಲಿದ್ದಾರೆ.

ಕೇವಲ ಮೂರು ಮಂದಿಯನ್ನು ಮೂವತ್ತು ಮಂದಿ ಎಂದು ಸುಳ್ಳು ಪ್ರಚಾರ ಮಾಡಿದ ಮಾಧ್ಯಮಗಳು ನಂಬಿಕೆಗರ್ಹವೇ ಎಂದು ಜನರೇ ತೀರ್ಮಾನಿಸಿ. ಕರ್ನಾಟಕದ 153 ಪ್ರಯಾಣಿಕರೆಲ್ಲರೂ ಕ್ವಾರೈಂಟೈನಲ್ಲಿದ್ದು ತಪ್ಪಿಸಿಕೊಂಡವರು ಯಾರು ಎಂದು ಸುಳ್ಳು ಪ್ರಚಾರ ಮಾಡಿದ ಮಾಧ್ಯಮಗಳು ದಯವಿಟ್ಟು ಜನರಿಗೆ ತಿಳಿಸಿ. ಅಥವಾ ಸುಳ್ಳು ಪ್ರಚಾರಕ್ಕೆ ಸ್ಪಷ್ಟೀಕರಣ ನೀಡಿ. ಯಾವ ಹೋಟೆಲ್ ನಲ್ಲಿ ಎಷ್ಟು ಮಂದಿ ಇದ್ದಾರೆ ಎಂಬುವುದರ ಬಗ್ಗೆ ಸ್ಪಷ್ಟ ಮಾಹಿತಿ ಕೆಸಿಎಫ್ ಬಳಿಯಿದ್ದು ಅಗತ್ಯ ಬಂದರೆ ತಿಳಿಸಲು ತಯಾರಿದೆ.

ಜನಪ್ರಿಯ ನಾಯಕ ಯುಟಿ ಖಾದರ್ ಮಾತ್ರವಲ್ಲದೆ, ರಹೀಂ ಉಚ್ಚಿಲ್, ಡಾ। ಶೈಖ್ ಬಾವ, ಹರ್ಷದ್ ವರ್ಕಾಡಿ ಮೊದಲಾದ ನಾಯಕರು ನಿನ್ನೆ ರಾತ್ರಿ ಸಮಸ್ಯೆ ಬಗಹರಿಸುವಲ್ಲಿ ಸಹಕರಿಸಿದ್ದಾರೆ. ಪ್ರಯಾಣಿಕರನ್ನು ಎಲ್ಲೂ ನಾವು ಕೈಬಿಡದೆ ಇಪ್ಪತ್ತು ಸಾವಿರ ರೂಪಾಯಿ ವೆಚ್ಚದಲ್ಲಿ 150 ಮಂದಿಗೆ ಊಟ ತಲುಪಿಸಿದ್ದೇವೆ. ಮೂವತ್ತು ಸಾವಿರ ಬಾಡಿಗೆ ಕೊಟ್ಟು ಕಾಸರಗೋಡು ಡಿಪೋ ದಿಂದ ಆರು ಸರ್ಕಾರಿ ಬಸ್ ಮೂಲಕ ಕೇವಲ ಒಂದು ಗಂಟೆಯಲ್ಲಿ ಮಂಗಳೂರು ಕ್ವಾರಿಂಟಿನ್ ಗೆ ತಲುಪಿಸಿದ್ದೇವೆ. ಇದು ಬೇಜಾವಾಬ್ದಾರಿತನವೇ?

ಜವಾಬ್ದಾರಿ ಕಳೆದುಕೊಂಡು ಬೇಜಾವಾಬ್ದಾರಿಯ ರಿಪೋರ್ಟ್ ಪ್ರಕಟಿಸುವ ಮಾಧ್ಯಮಗಳು ಜವಾಬ್ದಾರಿ ಬಗ್ಗೆ ಪಾಠ ಮಾಡುವಾಗ ನಗಬೇಕೋ ಅಳಬೇಕೋ ಗೊತ್ತಾಗುತ್ತಿಲ್ಲ. ದಯವಿಟ್ಟು ಜನರನ್ನು ಭೀತಿಗೊಳಪಡಿಸದೆ ಪತ್ರಿಕಾ ಧರ್ಮವನ್ನು ಕಾಪಾಡಿ.

error: Content is protected !! Not allowed copy content from janadhvani.com