janadhvani

Kannada Online News Paper

ಒಕ್ಕೆತ್ತೂರು ನಿವಾಸಿ ದಮಾಮ್ ನಲ್ಲಿ ಮೃತ್ಯು: ಅಂತ್ಯಕ್ರಿಯೆಗೆ ಕೆಸಿಎಫ್ ನೆರವು

ಸೌದಿ ಅರೇಬಿಯಾ: ದಮ್ಮಾಮಿನಲ್ಲಿ ಚಾಲಕ ವೃತ್ತಿಯಲ್ಲಿದ್ದ ಬಂಟ್ವಾಳ ತಾಲೂಕಿನ ವಿಟ್ಲ ಒಕ್ಕೆತ್ತೂರು ನಿವಾಸಿ ವಿ.ಎಸ್ ಅಬೂಬಕ್ಕರ್ (ಪುತ್ತುಚ್ಚ 60 ವ.) ಎಂಬವರು ಹೃದಯಾಘಾತದಿಂದ ಜೂನ್ 7 ರಂದು ದಮ್ಮಾಮಿನ ಸೆಂಟ್ರಲ್ ಹಾಸ್ಪಿಟಲ್ ನಲ್ಲಿ ಮೃತಪಟ್ಟಿದ್ದರು.

ತಾರೀಕು 9 ರಂದು ವಿಷಯ ತಿಳಿದ ಟೀಮ್ ಸಾಂತ್ವನ ವಿಭಾಗವು ಕೂಡಲೇ ಕಾರ್ಯಪ್ರವರ್ತರಾಗಿ ಮೃತರ ಕುಟುಂಬಸ್ಥರ ಅಪೇಕ್ಷೆಯ ಮೇರೆಗೆ, ಕೆ.ಸಿ.ಎಫ್ ದಮ್ಮಾಮ್ ಝೋನ್ ನಾಯಕರು ಬೇಕಾದ ಎಲ್ಲಾ ದಾಖಲೆ ಪತ್ರಗಳನ್ನು ಪೂರ್ತಿಗೊಳಿಸಿ ದಮ್ಮಾಮಿನಲ್ಲಿ ಅಂತ್ಯಕ್ರಿಯೆ ನಡೆಸಲು ಸಹಕರಿಸಿದರು.

ಹಲವಾರು ವರ್ಷಗಳಿಂದ ದಮ್ಮಾಮಿನಲ್ಲಿ ಟ್ಯಾಕ್ಸಿ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದ ಇವರು, ಕುಟುಂಬದ ಏಕೈಕ ಆಧಾರ ಸ್ಥಂಬವಾಗಿದ್ದರು. ಕಳೆದ ವರ್ಷವಷ್ಟೇ ತಾಯಿ ಹಾಗೂ ಸಹೋದರಿಯನ್ನು ಕಳೆದುಕೊಂಡು ತೀವ್ರವಾಗಿ ನೊಂದುಕೊಂಡಿದ್ದರು. ಮೃತರು ಪುತ್ರ, ಪುತ್ರಿ ಹಾಗೂ ಪತ್ನಿಯನ್ನು ಅಗಲಿದ್ದಾರೆ.

ಕೆ.ಸಿ.ಎಫ್ INC ನಾಯಕರಾದ ರೈಸ್ಕೊ ಅಬೂಬಕ್ಕರ್ ಹಾಜಿ ಹಾಗು ಝೋನ್ ಅಧ್ಯಕ್ಷರಾದ ಅಬ್ದುರ್ರಶೀದ್ ಸಖಾಫಿಯವರ ನೇತ್ರತ್ವದಲ್ಲಿ ಕ್ಲಪ್ತ ಸಮಯಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ದಮ್ಮಾಂ ಕೆ.ಸಿ.ಎಫ್ ರಿಲೀಫ್ ಕನ್ವೀನರ್ ಬಾಷಾ ಗಂಗಾವಳಿ, ಕೆಸಿಎಫ್ ಸೌದಿ ರಾಷ್ಟ್ರೀಯ ಸಾಂತ್ವನ ವಿಭಾಗದ ಚೆಯರ್ಮೇನ್ ಮೊಹಮ್ಮದ್ ಮಲೆಬೆಟ್ಟು, ಸರಿಪಡಿಸಿಕೊಡಲು ಸಹಕರಿಸಿದರು. ಮೃತರ ಧಫನ್ ಕಾರ್ಯದಲ್ಲಿ ಮೃತರ ಕುಟುಂಬಸ್ಥರು ಭಾಗವಹಿಸಿದ್ದರು.