janadhvani

Kannada Online News Paper

ಭಟ್ಕಳ್ ನಿವಾಸಿ ಬಹರೈನಿನಲ್ಲಿ ಮೃತ್ಯು- ಅಂತ್ಯ ಸಂಸ್ಕಾರಕ್ಕೆ ಕೆ.ಸಿ.ಎಫ್ ನೆರವು

ಮನಾಮ: ಇತ್ತೀಚೆಗೆ ಬಹರೈನ್ ನಲ್ಲಿ ಮರಣ ಹೊಂದಿದ ಭಟ್ಕಳ್ ನಿವಾಸಿ ನಿಸಾರ್ ಅಹ್ಮದ್ ರವರ ಅಂತ್ಯ ಸಂಸ್ಕಾರವು ಕೆ.ಸಿ.ಎಫ್ ಬಹರೈನ್ ಸಾಂತ್ವನ ವಿಭಾಗದ ನೆರವಿನೊಂದಿಗೆ ನಡೆಯಿತು.
ಅಂತ್ಯ ಸಂಸ್ಕಾರಕ್ಕೆ ಸಂಬಂಧಿಸಿದ ವಿವಿಧ ಇಲಾಖೆಗಳ ಧಾಖಲೆ ಪತ್ರಗಳನ್ನು ಕೆ.ಸಿ.ಎಫ್ ಬಹರೈನ್ ಕೋಶಾಧಿಕಾರಿ ಇಕ್ಬಾಲ್ ಮಂಜನಾಡಿ ಸಂಗ್ರಹಿಸಿದರು.

ಎಮ್ ಎಮ್ ಜುಫ್ರಿ ಮನಾಮದಲ್ಲಿ ಉದ್ಯೋಗ ದಲ್ಲಿದ್ದ ನಿಸಾರ್ ಅಹಮ್ಮದ್ ರವರು ತನ್ನ ರೂಮಿನಲ್ಲಿ ಹೃದಯಾಘಾತ ದಿಂದ ಮರಣ ಹೊಂದಿದ್ದು, ಮಕ್ಕಳು, ಪತ್ನಿ ಹಾಗೂ ಅಪಾರ ಬಂದು ಬಳಗದವರನ್ನು ಅಗಲಿದ್ದಾರೆ.
ಇನ್ನೋರ್ವ ವ್ಯಕ್ತಿ ಹೈದರಾಬಾದ್ ಮೂಲದ ಮುಈನುದ್ದೀನ್ ಖುರೈಶಿಯವರು ಬಹರೈನಿನಲ್ಲಿ ನಿಧನ ಹೊಂದಿದ್ದು ಅವರ ಅಂತ್ಯ ಕ್ರಿಯೆಯು ಕೆ.ಸಿ.ಎಫ್ ಸಹಾಯದೊಂದಿಗೆ ನೆರವೇರಿತು.

ಕೆ.ಸಿ.ಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರ ಸಹಿತ ಸಾಂತ್ವನ ವಿಭಾಗದ ತಂಡವು ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿತು.
ಮೃತರ ಮಗ್ ಫಿರತ್ ಹಾಗೂ ಮರ್ಹಮತಿಗಾಗಿ ದುವಾ ಮಾಡಲು ಕೆ.ಸಿ.ಎಫ್ ಬಹರೈನ್ ರಾಷ್ಟ್ರೀಯ ಸಮಿತಿಯು ಸರ್ವ ಸುನ್ನೀ ಕುಟುಂಬಗಳಲ್ಲೂ ವಿನಂತಿಸಿಕೊಂಡಿದೆ.

ಸಾಂತ್ವನ ವಿಭಾಗ: ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿ