janadhvani

Kannada Online News Paper

ಈ ಕ್ರೂರತೆಗೆ ಯಾರು ಉತ್ತರಿಸುತ್ತಾರೆ? ತನ್ನವರನ್ನು ಕಾಣದೇ ಯಾತ್ರೆಯಾದ ಅಬೂತಾಹಿರ್

ಅಯ್ಯಂಗೇರಿ(ಕೊಡಗು): ಪೋಷಕರು ಮತ್ತು ಒಡಹುಟ್ಟಿದವರನ್ನು ಕಾಣುವ ಹಂಬಲದಿಂದ ಹೊರಟ ಅಬು ತಾಹಿರ್ ಸರ್ಕಾರಗಳ ತೀರ್ಮಾನದಿಂದ ತನ್ನ ಜೀವವನ್ನೆ ಕಳೆದುಕೊಂಡಿದ್ದಾರೆ. ಕೊಡಗು ಅಯ್ಯಂಗೇರಿ ನಿವಾಸಿ ಅಬೂತಾಹಿರ್, ಕೇರಳದ ಮಲಪ್ಪುರಂ ನಲ್ಲಿರುವ ಮುನವಿರುಲ್ ಇಸ್ಲಾಂ ದರ್ಸ್ ವಿದ್ಯಾರ್ಥಿಯೂ ಆದ ಯುವ ವಿದ್ವಾಂಸ ಲಾಕ್‌ಡೌನ್ ಕಾರಣ ಊರಿಗೆ ಬರಲಾಗದೆ ಸಿಕ್ಕಿ ಹಾಕಿ ಕೊಂಡಿದ್ದರು.

ಹಲವು ಪ್ರಯತ್ನಗಳ ನಂತರ ಕೊನೆಗೂ ಪಾಸ್ ದೊರೆತ ಕಾರಣ ತನ್ನ ಬೈಕ್ ನಲ್ಲಿ ಕೇರಳ ಗಡಿಯನ್ನು ದಾಟಿದರೂ ಕರ್ನಾಟಕ ಸರ್ಕಾರದ ತೀರ್ಮಾನ ಪ್ರಕಾರ ಮತ್ತೆ ಕೇರಳಕ್ಕೆ ವಾಪಸ್ಸು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಅಸಹಾಯಕ ಪರಿಸ್ಥಿತಿಯಲ್ಲಿ ಪೋಷಕರನ್ನು ವಿಷಯ ತಿಳಿಸಿ ಮತ್ತೆ ಕೇರಳಕ್ಕೆ ವಾಪಸ್ಸಾಗುತ್ತಿದ್ದ ವೇಳೆ ರಾತ್ರಿ 11 ಗಂಟೆಗೆ ತಾಮರಶ್ಶೇರಿ ಘಾಟ್ ನಲ್ಲಿ ಕಾರೊಂದಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಮಾರಣಾಂತಿಕ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮರಣ ಹೊಂದಿದರು.

ತನ್ನ ಪೋಷಕರನ್ನು ಮತ್ತು ಒಡ ಹುಟ್ಟಿದವರನ್ನು ಕಾಣುವ ಹಂಬಲದಿಂದ ಹೊರಟ ಯುವ ವಿದ್ವಾಂಸ ಶವವಾಗಿ ತನ್ನ ಮನೆಗೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾದದ್ದು ನಮ್ಮ ಆಡಳಿತ ವ್ಯವಸ್ಥೆಯ ಸೋಲಲ್ಲವೇ.. ಈ ಕ್ರೂರತೆಗೆ ಯಾರು ಉತ್ತರಿಸುತ್ತಾರೆ.. ಈ ಲಾಕ್ ಡೌನ್ ಇನ್ನೆಷ್ಟು ಸಾವು ನೋವುಗಳು?

error: Content is protected !! Not allowed copy content from janadhvani.com