ಮಂಗಳೂರು: 2008ರಲ್ಲಿ ಕರ್ನಾಟಕದ ಮೊತ್ತ ಮೊದಲ ಆನ್‌ಲೈನ್ ದಅವಾ ಕಾರ್ಯಕ್ರಮವಾಗಿ ಬೈಲಕ್ಷ್ ಮೆಸೆಂಜರ್‌ನಲ್ಲಿ ಕಾರ್ಯಾರಂಭಿಸಿದ ಕರ್ನಾಟಕ ಸುನ್ನೀ ಆನ್‌ಲೈನ್ ಕ್ಲಾಸ್ ರೂಮ್ (KSOCR) ಅಂತರ್ಜಾಲದಲ್ಲಿ ಕಾಲಕ್ರಮೇಣ ಯೂಟೂಬ್ ಲೈವ್, ಜನಧ್ವನಿ ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಪಾದರ್ಪಣೆ ಮಾಡಿತು. ಇಸ್ಲಾಮಿಕ ದಅವಾ ಮೊಬೈಲ್ ಆ್ಯಪ್ ಮೂಲಕ KSOCR ಮೀಡೀಯಾ ಮೂಲಕ ತನ್ನ ಕಾರ್ಯಕ್ಷೇತ್ರವನ್ನು ವ್ಯಾಪಿಸಿಕೊಂಡಿತು.
ಪ್ರಮುಖವಾಗಿ ಅನಿವಾಸಿ ಸುನ್ನೀ ಕಾರ್ಯಕರ್ತರೆಡೆಯಲ್ಲಿ ಪ್ರಚಲಿತವಾಗಿದ್ದ ಕರ್ನಾಟಕ ಸುನ್ನೀ ಆನ್‌ಲೈನ್ ಕ್ಲಾಸ್ ರೂಮ್ (KSOCR) ಇದೀಗ ಜಗದೆಲ್ಲೆಡೆ ಪ್ರಮುಖ ದಅವಾ ಮಾದರಿಯಾಗಿ ಪ್ರಚಾರದಲ್ಲಿದೆ.
ಊರಿನ ಧಾರ್ಮಿಕ ಕಾರ್ಯಕ್ರಮಗಳ ನೇರಪ್ರಸಾರವನ್ನು ಬೈಲಕ್ಷ್ ಮೆಸೇಂಜರ್ ಮೂಲಕ ಪ್ರಾರಂಭಿಸಿದ KSOCR, ಯೂಟ್ಯೂಬ್ ಲೈವ್ ಪ್ರಚಾರ ಪಡೆದಂತೆ ತನ್ನ ಲೈವ್ ಯೂಟ್ಯೂಬ್‌ಗೆ ಬದಲಾಯಿಸಿಕೊಂಡಿತ್ತು.
ಜನಧ್ವನಿ ಆನ್‌ಲೈನ್ ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿಟ್ಟ KSOCR ತಂಡವು ಮರೀಚಿಕೆಯಾಗಿದ್ದ ಅನ್‌ಲೈನ್ ಸುನ್ನೀ ಪತ್ರಿಕೋದ್ಯಮಕ್ಕೆ ನಾಂದಿಯಾಯಿತು.
ದಶಕಗಳಿಂದ ಆನ್‌ಲೈನ್ ದಅವಾ ರಂಗದಲ್ಲಿ ವಿಶೇಷ ಛಾಪನ್ನು ಮೂಡಿಸಿದ KSOCR ಸ್ಥಾಪಕ ಅಲ್-ಹಾಫಿಝ್ ಅಬ್ದುಸ್ಸಲಾಮ್ ನಿಝಾಮಿ ಚೆನ್ನಾರ್‌ರವರ ನೇತೃತ್ವದಲ್ಲಿ ಕಾರ್ಯಾಚರಣೆ ಮುಂದುವರೆಸಿದೆ.
ಇತ್ತೀಚೆಗೆ ಆನ್‌ಲೈನ್ ಮೂಲಕ ನಡೆದ ಅಡ್ಮಿನ್‌ಗಳ ವಿಶೇಷ ಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಬಹು| ಅಲ್-ಹಾಜ್ ಜಿ.ಎಂ. ಮುಹಮ್ಮದ್ ಕಾಮಿಲ್ ಸಖಾಫಿಯವರನ್ನು ಸಲಹಾ ಸಮಿತಿ ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು.
KSOCR ಕಾರ್ಯಕಾರೀ ಸಮಿತಿ ಈ ಕೆಳಗಿನಂತಿದೆ:
ಅಧ್ಯಕ್ಷರು: ಅಲ್-ಹಾಫಿಝ್ ಅಬ್ದುಸ್ಸಲಾಮ್ ನಿಝಾಮಿ ಚೆನ್ನಾರ್
ಪ್ರಧಾನ ಕಾರ್ಯದರ್ಶಿ: ಸುಲೈಮಾನ್ ನಿಸಾರ್ ನಂದಾವರ
ಪೈನಾನ್ಸ್ ಸೆಕ್ರೆಟರಿ: ಮುಹಮ್ಮದ್ ಹನೀಫ್ ಸಾಲೆತ್ತೂರು (ವಿಷನ್ ಗ್ರಾಫಿಕ್ಷ್)
KSOCR ಮೀಡೀಯಾ ಚೆಯರ್‌ಮ್ಯಾನ್: ಮಸೂದ್ ಅಲೀ ಕಿನ್ಯಾ (ಬಗ್ದಾದ್)
KSOCR ಅಡ್ಮಿನ್ ವಿಭಾಗ ಚೆಯರ್‌ಮ್ಯಾನ್: ಕೆ.ಎಸ್ ಮುಹಮ್ಮದ್ ಶಾಕೀರ್ ನೆಕ್ಕರೆ
KSOCR ಪಬ್ಲಿಶಿಂಗ್ ವಿಭಾಗ ಚೆಯರ್‌ಮ್ಯಾನ್: ಹಾಫಿಳ್ ಜಿ.ಎಂ ಸುಲೈಮಾನ್ ಹನೀಫಿ, ಪಾಣೆಮಂಗಳೂರು
ಜನಧ್ವನಿ ಮಾಧ್ಯಮ ವಿಭಾಗ ಕನ್ವೀನರ್: ನಝೀರ್ ಕೆಮ್ಮಾರ
KSOCR ಮಾರ್ಕೆಟಿಂಗ್ ವಿಭಾಗ ಕನ್ವೀನರ್: ಇಬ್ರಾಹೀಮ್ ಖಲೀಲ್ ಝುಹ್ರಿ ಪಂಜ
ಕಾರ್ಯಕಾರಿ ಸಮಿತಿ ಸದಸ್ಯರು: ಶಮೀರ್ ನಈಮೀ ಕಲ್ಲಿಕೋಟೆ (ಕೇರಳ), ಅಶ್ರಫ್ ಕಿನ್ಯಾ (ಮದೀನಾ ಮುನವ್ವರಾ), ಅಸ್ರು ಬಜ್ಪೆ (ಅಲ್-ಹಸಾ, KSA), ಮುಹಮ್ಮದ್ ರಿಯಾಝ್ ಕೊಂಡಂಗೇರಿ (ದುಬೈ), ಶಿಹಾಬ್ ಕಬಕ (KSA)
ನೂತನ ಸಮಿತಿಗೆ ಸರ್ವ ವಿಧ ಸಹಕಾರವನ್ನು ಸುನ್ನೀ ಸಮೂಹದೊಂದಿಗೆ ಅಪೇಕ್ಷೆಯೊಂದಿಗೆ KSOCR ಮಾಧ್ಯಮ ಬಳಗ