ರಿಯಾದ್: ಸೌದಿ ಗೃಹ ಸಚಿವಾಲಯದ ವೆಬ್ಸೈಟ್ ಆದ ಅಬ್ಶೀರ್ನಲ್ಲಿ ಹೆಚ್ಚುವರಿ ಸೇವೆಗಳನ್ನು ಸೇರಿಸಲಾಗಿದೆ. ಇಂದಿನಿಂದ ದೇಶದಲ್ಲಿ ಜನಿಸುವ ನವಜಾತ ಶಿಶುಗಳ ಬಗ್ಗೆ ಮಾಹಿತಿ, ಹೆತ್ತವರ ದಾಖಲೆಗಳಲ್ಲಿ ಅಬ್ಶೀರ್ನಲ್ಲಿ ಸೇರಿಸಲು ಅವಕಾಶವಿದೆ.
ಹೊಸ ಆನ್ಲೈನ್ ಸೇವೆಗಳು ಸ್ಥಳೀಯರು ಮತ್ತು ವಿದೇಶಿಯರಿಗೆ ಸಮಾನವಾಗಿ ಪ್ರಯೋಜನವನ್ನು ನೀಡಲಿವೆ. ಗೃಹ ಸಚಿವಾಲಯ ಬಿಡುಗಡೆ ಮಾಡಿದ ಅಬ್ಶೀರ್ ಮೊಬೈಲ್ ಆ್ಯಪ್ ಅನ್ನು ಈಗಾಗಲೇ 50 ಲಕ್ಷಕ್ಕೂ ಹೆಚ್ಚು ಜನರು ಬಳಸಿದ್ದಾರೆ.