janadhvani

Kannada Online News Paper

ಕೋವಿಡ್ ಹೆಚ್ಚಳ: ನಿಯಂತ್ರಣವನ್ನು ಬಲಪಡಿಸುತ್ತಿದೆ ಕೊಲ್ಲಿ ರಾಷ್ಟ್ರ

ರಿಯಾದ್: ಕೊಲ್ಲಿಯಲ್ಲಿ ಭಾರತೀಯರು ಸೇರಿದಂತೆ ಕೋಮಿಡ್ ಮೂಲಕ ಮರಣ ಹೊಂದಿದವರ ಸಂಖ್ಯೆ 560 ದಾಟಿದೆ.ವಿವಿಧ ಗಲ್ಫ್ ದೇಶಗಳಲ್ಲಿ ಇನ್ನೂ 4,537 ಜನರಿಗೆ ಈ ರೋಗ ಪತ್ತೆಯಾಗಿದೆ. ರೋಗ ಹರಡುವಿಕೆಯನ್ನು ತಡೆಗಟ್ಟುವ ಕ್ರಮಗಳನ್ನು ಬಲಪಡಿಸಲು ಕೊಲ್ಲಿ ರಾಷ್ಟ್ರಗಳು ತಯಾರಿ ನಡೆಸುತ್ತಿವೆ.

ಸೌದಿಯಲ್ಲಿ ಮರಣ ಸಂಖ್ಯೆ 273 ಕ್ಕೆ ಏರಿದೆ. ಸೌದಿಯಲ್ಲಿ ರೋಗಿಗಳ ಸಂಖ್ಯೆ 40,830 ದಾಟಿದ್ದು, ಸೌದಿಯಲ್ಲಿ ಹೊಸ ಪ್ರಕರಣಗಳ ಸಂಖ್ಯೆ ದಿನಕ್ಕೆ ಸುಮಾರು ಎರಡು ಸಾವಿರದಷ್ಟು ಏರುತ್ತಿದೆ.

ನಿನ್ನೆ ಕುವೈತ್‌ನಲ್ಲಿ ಭಾರತೀಯರು ಸೇರಿದಂತೆ ಕನಿಷ್ಠ ಹತ್ತು ಮಂದಿ ಮೃತಪಟ್ಟಿದ್ದು. ಇದರೊಂದಿಗೆ ಮರಣ ಸಂಖ್ಯೆ 82 ಕ್ಕೆ ಏರಿದೆ.

ಯುಎಇಯಲ್ಲಿ ಮರಣ ಮತ್ತು ಕಾಯಿಲೆಗಳ ಸಂಖ್ಯೆಯಲ್ಲಿ ಕುಸಿತ ಕಂಡುಬಂದಿದೆ. 6523 ಮಂದಿ ಗುಣಮುಖರಾಗಿದ್ದಾರೆ. ಮರಣ ಸಂಖ್ಯೆ 206 ಕ್ಕೆ ಏರಿದೆ.ಯುಎಇ ಯಲ್ಲಿ ಕೋವಿಡ್ ದೃಢಪಟ್ಟವರ ಸಂಖ್ಯೆ 20,386.

ಖತರ್‌ನಲ್ಲಿ ಹೊಸ ಪ್ರಕರಣಗಳಿಗೆ ಯಾವುದೇ ಕೊರತೆಯಿಲ್ಲ. ನಿನ್ನೆ 1,390 ಜನರಿಗೆ ಕೊರೋನ ಪತ್ತೆಯಾಗಿದೆ. ರೋಗಿಗಳ ಸಂಖ್ಯೆಯಲ್ಲಿ ಸೌದಿ ನಂತರ ಖತರ್ ಎರಡನೇ ಸ್ಥಾನದಲ್ಲಿದೆ. ಒಮಾನ್ ಮತ್ತು ಬಹ್‌ರೈನ್‌ನಲ್ಲಿ ಪರಿಸ್ಥಿತಿ ಹೆಚ್ಚು ನಿಯಂತ್ರಣದಲ್ಲಿದೆ.

ಏತನ್ಮಧ್ಯೆ, ಕೋವಿಡ್‌ನಿಂದ ಸಂಪೂರ್ಣವಾಗಿ ಚೇತರಿಸಿಕೊಂಡ ಜನರ ಸಂಖ್ಯೆ 30,000 ದಾಟಿದೆ. ತೀವ್ರ ನಿರ್ಬಂಧಗಳ ಹೊರತಾಗಿಯೂ, ರೋಗವು ಹರಡುತ್ತಲೇ ಇದೆ. ಅಧಿಕಾರಿಗಳು ನಿಯಂತ್ರಣವನ್ನು ವಿಸ್ತರಿಸುತ್ತಿದ್ದಾರೆ ಎನ್ನಲಾಗಿದೆ.