ಮುಂಬೈ: ಕೋಮು ದ್ವೇಷ ಪ್ರಚಾರಕ್ಕೆ ಯತ್ನಿಸಿದ ದೂರಿನ ಮೇರೆಗೆ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿಯನ್ನು ಬಂಧಿಸುವಂತೆ ಒತ್ತಾಯಿಸಿ ಟ್ವಿಟರ್‌ನಲ್ಲಿ ಅಭಿಯಾನ.
ಅರೆಸ್ಟ್ ಅರ್ನಬ್ ಹ್ಯಾಶ್‌ಟ್ಯಾಗ್ ಅಭಿಯಾನವು ಈಗಾಗಲೇ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದೆ. ಅನೇಕ ಜನರ ಟ್ವೀಟ್‌ಗಳಲ್ಲಿ ಅರ್ನಬ್ ಚಾನೆಲ್ ಚರ್ಚೆಯಲ್ಲಿ ಬಳಸಲಾದ “ದಿ ನೇಷನ್ಸ್ ವಾಂಟ್ಸ್ ಟು ನೋ ನಂಬರ್” ಎಂಬ ನುಡಿಗಟ್ಟನ್ನು ಬಳಸಲಾಗಿದೆ.
ಈ ಹಿಂದೆ ಚಾನೆಲ್ ಮೂಲಕ ದ್ವೇಷ ಪ್ರಚಾರವನ್ನು ಪ್ರಸಾರ ಮಾಡಿದ್ದಕ್ಕಾಗಿ ಅರ್ನಬ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಏಪ್ರಿಲ್ 14 ರಂದು ವಲಸೆ ಕಾರ್ಮಿಕರ ಗುಂಪೊಂದು ಬಾಂದ್ರಾ ರೈಲ್ವೆ ನಿಲ್ದಾಣದ ಸಮೀಪ ಪ್ರತಿಭಟನೆ ನಡೆಸಿದ್ದನ್ನು ಸಮೀಪದ ಮಸೀದಿಗೆ ಸಂಬಂಧಿಸಿದಂತೆ ಪ್ರಚಾರ ಪಡಿಸಿದ್ದಕ್ಕೆ ಪ್ರಕರಣ ದಾಖಲಾಗಿತ್ತು.
ಪಾಲ್ಘರ್ ಹತ್ಯಾಕಾಂಡದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಅರ್ನಬ್ ಪ್ರಚಾರ ನಡೆಸಿದ್ದು, ಈ ಕುರಿತು ಛತ್ತೀಸ್ಗಡ್ ಆರೋಗ್ಯ ಮಂತ್ರಿ ಟಿ.ಎಸ್.ಸಿಂಗ್ದಿಯೋ, ಕಾಂಗ್ರೆಸ್ ಮುಖಂಡ ಮೋಹನ್ ಮರ್ಕೋಂ ಮುಂತಾದವರು ಧ್ವೇಷ ಪ್ರಚಾರಕ್ಕಾಗಿ ಅರ್ನಬ್ ವಿರುದ್ಧ ಪ್ರಕಲಣ ದಾಖಲಿಸಿದ್ದರು.