janadhvani

Kannada Online News Paper

ಮಾಲೆಂಗ್ರಿ ಪ್ರೆಂಡ್ಸ್ ವಾಟ್ಸಪ್ ಗ್ರೂಪ್ ವತಿಯಿಂದ 40 ಕುಟುಂಬಕ್ಕೆ “5 ನೇ ವರ್ಷದ ರಮಳಾನ್ ಕಿಟ್ “ವಿತರಣೆ

ಸುಳ್ಯ;-ಸುಳ್ಯ ತಾಲೂಕಿನ ಸುಂದರ ರಮಣೀಯ ಊರಿನಲ್ಲಿ ಸೌಹಾರ್ದತೆಗೆ ಹೆಸರುವಾಸಿಯಾದ ಶಾಫಿ ಬಿ.ಯಂ ದುಬೈ ರವರ ಸಾರಥ್ಯದಲ್ಲಿ ರಚಿಸಿದ ಮಾಲೆಂಗ್ರಿ ವಾಟ್ಸಪ್ ಗ್ರೂಪ್ ಕಳೆದ 5️ ವರ್ಷಗಳಿಂದ ಸುಳ್ಯ ತಾಲೂಕಿನಾಂದ್ಯಂತ ಯಶಸ್ವಿಯಾಗಿ ರಮಳಾನ್ ತಿಂಗಳಲ್ಲಿ ಬಡವರಿಗೆ ಆಹಾರ ಧಾನ್ಯ ಗಳನ್ನು ನೀಡುತ್ತಿದೆ.

ಆದರೆ ಈ ವರ್ಷ ಕೋವಿಡ್-19 ಮಹಾಮಾರಿಯಿಂದ ಕಷ್ಟ ಅನುಭವಿಸುತ್ತಿರುವುದರಿಂದ ಪುನ್ಚತ್ತಾರು ಜಮಾಅತ್ತಿಗೆ ಒಳಪಟ್ಟ ಸುಮಾರು 40 ಕುಟುಂಬದ ಒಂದು ತಿಂಗಳಿನ ಸಂಪೂರ್ಣ ಆಹಾರ ಧಾನ್ಯ ಗಳನ್ನು ಈ ವರ್ಷವು ನೀಡಿದ್ದಾರೆ.

“ನುಸ್ರತುಲ್ ಇಸ್ಲಾಂ ಗಲ್ಫ್ ಕಮೀಟಿ” ಯ ಯುವಕರು ಹಾಗೂ “SSF ಯುನಿಟ್ ಮಾಲೆಂಗ್ರಿ” ಸದಸ್ಯರ ಸಹಯೋಗದೊಂದಿಗೆ ಈ ವರ್ಷದ ಯೋಜನೆ ಬಹಳ ಯಶಸ್ವಿಯಾಗಿ ನಡೆಯಿತು.

ಇಂದು ನೂರುಲ್ ಇಸ್ಲಾಂ ಮದರಸ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ (ಸರಕಾರದ ಆದೇಶದಂತೆ)
ಬಹು//ಯೂಸುಫ್ ಸಖಾಫಿ ಉಸ್ತಾದರ ಅದ್ಯಕ್ಷತೆಯಲ್ಲಿ ಆರಂಬಿಸಿ,
ಬಹು//ಹಸೈನಾರ್ ಝುಹುರಿ ಉಸ್ತಾದ್ (ಖತೀಬರು ಪುಣ್ಚತ್ತಾರ್) ರ ದುವಾಶಿರ್ವಚನದೋಂದಿಗೆ ಮುಕ್ತಾಯವಾಯಿತು.

ಇದೇ ವೇದಿಕೆಯಲ್ಲಿ
ಬಹು//ಹನೀಪ್ ಬಿ.ಯಂ ಅದ್ಯಕ್ಷರು SSF ಯುನಿಟ್ ಮಾಲೆಂಗ್ರಿ,
ಬಹು//ಲುಕ್ಮಾನ್ ಮಾಲೆಂಗ್ರಿ ಅದ್ಯಕ್ಷರು, NYF ಕಮೀಟಿ ಮಾಲೆಂಗ್ರಿ,
ಬಹು//ಆಬಿದ್ ಮುರುಳ್ಯ ಪ್ರ.ಕಾರ್ಯದರ್ಶಿ, NYF ಕಮೀಟಿ ಮಾಲೆಂಗ್ರಿ
ಬಹು//ಖಾದರ್ ಮಾಲೆಂಗ್ರಿ ಅದ್ಯಕ್ಷರು, ನೂರುಲ್ ಇಸ್ಲಾಂ ಮದರಸ&ಮಸೀದಿ ಮಾಲೆಂಗ್ರಿ
ಬಹು//ಉಮ್ಮರ್ ಮಾಲೆಂಗ್ರಿ ಅದ್ಯಕ್ಷರು, ಬದ್ರೀಯಾ ಜುಮ್ಮಾ ಮಸೀದಿ ಪುನ್ಚತ್ತಾರು ಮುಂತಾದ ಗಣ್ಯರು ಉಪಸ್ಥಿತರಿದ್ದರು.

ನುಸ್ರತುಲ್ ಇಸ್ಲಾಂ ಗಲ್ಫ್ ಕಮೀಟಿಯ ಅದ್ಯಕ್ಷರಾದ ಬಹು//ಉಮ್ಮರ್ ಕಾಯ್ರತಡ್ಕ ಹಾಗೂ ಬಹು ಇಸಾಕ್ ಬಿ.ಯಂ ಮಾಲೆಂಗ್ರಿ (ಪ್ರ.ಕಾರ್ಯದರ್ಶಿ,ನುಸ್ರತುಲ್ ಇಸ್ಲಾಂ ಗಲ್ಫ್ ಕಮೀಟಿ) ರವರು ಉಸ್ತುವಾರಿ ವಹಿಸಿದ್ದರು.

ಮಾಲೆಂಗ್ರಿಯ ಯುವಕರ ಶ್ರಮಕ್ಕೆ
ಶಾಪಿ ಬಿ.ಯಂ ದುಬೈ ಅಭಿನಂದನೆ ಸಲ್ಲಿಸಿದರು.

ವರದಿ;- ಮನ್ಸೂರ್ ಬೆಳ್ಳಾರೆ.

error: Content is protected !! Not allowed copy content from janadhvani.com