janadhvani

Kannada Online News Paper

ಸೌದಿ: ವಾಸ ಸ್ಥಳ ಹಾಗೂ ಕಾರ್ಮಿಕ ಶಿಬಿರಗಳಲ್ಲಿ ಕೋವಿಡ್ ತಪಾಸಣೆ ಆರಂಭ

ರಿಯಾದ್: ಸೌದಿಯ ನಿವಾಸ ಕೇಂದ್ರಗಳಲ್ಲಿ ತಪಾಸಣೆ ಪ್ರಾರಂಭಗೊಂಡಿರುವುದಾಗಿ, ಸೌದಿ ಆರೋಗ್ಯ ಸಚಿವಾಲಯವು ಮಾಹಿತಿ ನೀಡಿದೆ.

ಪ್ರಸ್ತುತ, ಆರೋಗ್ಯ ಇಲಾಖೆ ವತಿಯಿಂದ 200 ಟೀಂಗಳಿಂದ ಕಾರ್ಮಿಕ ಶಿಬಿರಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ತಪಾಸಣೆ ಪ್ರಾರಂಭವಾಗುತ್ತಿದ್ದಂತೆ, ಕಾರ್ಮಿಕ ಶಿಬಿರಗಳಲ್ಲಿ ಮತ್ತು ವಿದೇಶಿ ಮೂಲದ ಪ್ರದೇಶಗಳಲ್ಲಿ ನೂರಾರು ಪ್ರಕರಣಗಳು ಕಂಡುಬಂದಿವೆ. ಸುಮಾರು ಒಂದೂವರೆ ಕೋಟಿ ಜನರ ತಪಾಸಣೆ ನಡೆಸಲಾಗುವುದು.

ದೇಶದ ಪ್ರತಿಯೊಂದು ವಸತಿ ಪ್ರದೇಶಗಳಲ್ಲಿ ನಿಯಮಿತವಾಗಿ ತಪಾಸಣೆ ನಡೆಸಲು ಯೋಜನೆ ರೂಪಿಸಲಾಗಿದೆ. ಜನರು ಕಿಕ್ಕಿರಿದು ಸೇರಿದರೆ, ಈ ನಿಟ್ಟಿನಲ್ಲಿ ಸಚಿವಾಲಯ ಕ್ರಮ ಕೈಗೊಳ್ಳಲಿದೆ. ತಪಾಸಣೆಗೆ ಹೆಚ್ಚು ಸಮಯಾವಕಾಶ ಬೇಕಾಗಿದ್ದು, ಹಂತ ಹಂತವಾಗಿ ಪೂರ್ಣಗೊಳ್ಳಲಿದೆ. ಸೋಂಕಿಗೆ ಒಳಗಾಗುವ ಪ್ರದೇಶಗಳಲ್ಲಿ ಜನರ ಉಷ್ಣತೆಯನ್ನು ಪರಿಶೀಲಿಸಲಾಗುತ್ತದೆ. ಆದರೆ ಪ್ರತಿ ಮನೆಯಲ್ಲೂ ತಪಾಸಣೆ ನಡೆಸಲಾಗುವುದಿಲ್ಲ ಎಂದು ಅರಬ್ ಸುದ್ದಿ ಮಾಧ್ಯಮಗಳನ್ನು ಉದ್ದರಿಸಿ ಸಚಿವಾಲಯ ವಿವರಿಸಿದೆ.

ದೇಹದ ಉಷ್ಣತೆ 38 ಕ್ಕಿಂತ ಹೆಚ್ಚಿರುವವರಿಗೆ ಕೋವಿಡ್ ಮಾರ್ಗಸೂಚಿ ಪರೀಕ್ಷೆಗಳನ್ನು ನಡೆಸಲಾಗುವುದು. ರೋಗಲಕ್ಷಣವು ಪತ್ತೆಯಾದರೆ, ಗಂಟಲ ದ್ರವವನ್ನು ಪರಿಶೀಲಿಸಲಾಗುತ್ತದೆ. ಫಲಿತಾಂಶದ ಹಿನ್ನೆಲೆಯಲ್ಲಿ ಐಸೋಲೇಷನ್‌ಗೆ ಒಳಪಡಿಸಲಾಗುತ್ತದೆ. ಪ್ರಸ್ತುತ ಜನನಿಬಿಡ ಪ್ರದೇಶಗಳನ್ನು ಕೇಂದ್ರೀಕರಿಸಿ ತಪಾಸಣೆ ನಡೆಯಲಿದೆ.

ಸೌದಿ ಅರೇಬಿಯಾದಲ್ಲಿ ಕೋವಿಡ್‌ನಿಂದ ರಕ್ಷಣೆಯನ್ನು ಬಲಪಡಿಸಲು ಇತ್ತೀಚೆಗೆ ಚೀನಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಈ ಉದ್ದೇಶಕ್ಕಾಗಿ ತೊಂಬತ್ತು ಮಿಲಿಯನ್ ಕೋವಿಡ್ ಕಿಟ್‌ಗಳು ಸೌದಿ ಅರೇಬಿಯಾಕ್ಕೆ ರವಾನೆಯಾಗಲಿವೆ.

ಚೀನಾದಿಂದ 500 ಜನರ ನಿಯೋಗ ಸೌದಿ ಅರೇಬಿಯಾಕ್ಕೆ ಆಗಮಿಸಲಿದೆ. ಒಪ್ಪಂದದ ಭಾಗವಾಗಿ ದೇಶದಲ್ಲಿ ಆರು ದೊಡ್ಡ ಪ್ರಾದೇಶಿಕ ಲ್ಯಾಬ್‌ಗಳನ್ನು ಸ್ಥಾಪಿಸಲಾಗುವುದು. ದಿನಕ್ಕೆ 10,000 ಪರೀಕ್ಷೆಗಳನ್ನು ಮಾಡಬಲ್ಲ ಮೊಬೈಲ್ ಪ್ರಯೋಗಾಲಯಗಳು ಇದರಲ್ಲಿ ಸೇರಿವೆ. ಒಂದು ಕೋಟಿ ನಲವತ್ತೈದು ಲಕ್ಷ ಜನರ ಪರೀಕ್ಷೆ ನಡೆಯಲಿದೆ. ಈ ಪೈಕಿ 90 ಲಕ್ಷ ಜನರಿಗೆ ಚೀನಾ ಜೊತೆಗಿನ ಒಪ್ಪಂದದ ಪ್ರಕಾರ ಪರೀಕ್ಷೆಗಳನ್ನು ಪೂರ್ಣಗೊಳಿಸಲಾಗುತ್ತದೆ. ಉಳಿದವರನ್ನು ಯುಎಸ್, ಸ್ವಿಟ್ಜರ್ಲೆಂಡ್ ಮತ್ತು ದಕ್ಷಿಣ ಕೊರಿಯಾದಿಂದ ಬಂದ ಉಪಕರಣಗಳನ್ನು ಬಳಸಿ ಪರೀಕ್ಷಿಸಲಾಗುವುದು.