janadhvani

Kannada Online News Paper

ಎಸ್ಸೆಸ್ಸೆಫ್ ವಿಟ್ಲ ಡಿವಿಷನ್ ವತಿಯಿಂದ “ಖುಲೂದ್-20” ಕಾರ್ಯಕ್ರಮ

ವಿಟ್ಲ: ಎಸ್ಸೆಸ್ಸೆಫ್ ವಿಟ್ಲ ಡಿವಿಷನ್ ವತಿಯಿಂದ “ಲೈಟ್ ಆಫ್ ಖುರ್’ಆನ್’ ಎಂಬ ಧ್ಯೇಯದೊಂದಿಗೆ ಮೇ ತಿಂಗಳ 03, 10, 17 ರಂದು ರಮಳಾನ್ ಉಪನ್ಯಾಸ ಕಾರ್ಯಕ್ರಮ ” ಖುಲೂದ್-20″ ಆನ್‌ಲೈನ್‌ ಮೂಲಕ ನಡೆಯಲಿದೆ.

ರಮಳಾನ್ ತಿಂಗಳ ರವಿವಾರ ದಂದು ಬೆಳಗ್ಗೆ 11:00 ಗಂಟೆಗೆ ಕಾರ್ಯಕ್ರಮ ಪ್ರಸಾರವಾಗಲಿದ್ದು, ವಿಟ್ಲ ಡಿವಿಷನ್ ಅಧ್ಯಕ್ಷರಾದ ‘ಅಬೂಬಕ್ಕರ್ ಹಿಮಮಿ ಸಖಾಫಿ ವಿಟ್ಲ’ ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ,
ಮೇ 03 ರಂದು ‘ರಮಳಾನಿನ ರಹ್ಮತ್-ಕುರ್’ಆನಿನ ಬರಕತ್’ ಎಂಬ ವಿಷಯದಲ್ಲಿ ‘ಹುಸೈನ್ ಸಖಾಫಿ ಅಲ್ ಹಿಕಮಿ ತೀರ್ಥಹಳ್ಳಿ’ ತರಗತಿ ನಡೆಸಲಿದ್ದು,
ಮೇ 10 ರಂದು ‘ಆಧ್ಯಾತ್ಮಿಕ ವಿಜಯದ ಸಂಕೇತ- ಬದ್ರ್ ರಣಾಂಗಣ’ ಎಂಬ ವಿಷಯದಲ್ಲಿ ‘ಕೆ.ಎಂ.ಅಶ್ರಫ್ ಸಖಾಫಿ ಕನ್ಯಾನ’ ತರಗತಿ ನಡೆಸುವರು.

ಮೇ 17 ರಂದು ‘ನಿರೀಕ್ಷಿತ ರಾತ್ರಿ-ಲೈಲತುಲ್ ಖದ್ರ್’ ಎಂಬ ವಿಷಯದಲ್ಲಿ ‘ಹಾಫಿಳ್ ಅಹ್ಮದ್ ಶರೀಫ್ ಸಖಾಫಿ ಅಲ್ ಕಾಮಿಲಿ’ ತರಗತಿ ನಡೆಸಲಿದ್ದಾರೆ ಎಂದು ಡಿವಿಷನ್ ಮೀಡಿಯಾ ಕಾರ್ಯದರ್ಶಿ ಜಹಾಝ್ ಅಳಿಕೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

error: Content is protected !! Not allowed copy content from janadhvani.com