janadhvani

Kannada Online News Paper

ಶೀಘ್ರದಲ್ಲೇ ಭಾರತ ಸೇರಿ ಹಲವು ರಾಷ್ಟ್ರಗಳಲ್ಲಿ ಕೊರೋನಾ ಅಂತ್ಯ-ಸಂಶೋಧನೆ

ಸಿಂಗಪೂರ್‌: ಕೊರೊನಾ ವೈರಸ್‌ ಶೀಘ್ರದಲ್ಲಿಯೇ ಭಾರತ ಸೇರಿ ಹಲವು ರಾಷ್ಟ್ರಗಳಲ್ಲಿ ಅಂತ್ಯವಾಗಲಿದೆ ಎಂದು ಸಿಂಗಪೂರ್‌ ತಂತ್ರಜ್ಞಾನ ಮತ್ತು ವಿನ್ಯಾಸ ವಿಶ್ವವಿದ್ಯಾಲಯದ (SUTD)ಯ ಸಂಶೋಧಕರು ಹೇಳಿದ್ದಾರೆ. ಕೃತಕ ಬುದ್ಧಮತ್ತೆ ಆಧಾರಿತ ದತ್ತಾಂಶ ವಿಶ್ಲೇಷಣೆಯಿಂದ ಹಲವು ರಾಷ್ಟ್ರಗಳಲ್ಲಿ ಮೇ ತಿಂಗಳಲ್ಲಿ ಕೊರೊನಾ ವೈರಸ್‌ ಅಂತ್ಯ ಕಾಣಲಿದೆ ಎಂದಿದ್ದಾರೆ.

ಎಸ್‌ಯುಟಿಡಿಯ ಸಂಶೋಧಕರು ಈ ಸಂಶೋಧನೆಗೆ ಎಸ್‌ಐಆರ್‌ (ಶಂಕಿತ-ಸೋಂಕಿತ-ಗುಣಮುಖ) ಮಾದರಿಯನ್ನು ಉಪಯೋಗಿಸಿದ್ದು, ವಿವಿಧ ದೇಶಗಳಲ್ಲಿ ಕೊರೊನಾ ಅಂತ್ಯವಾಗುವ ಪ್ರಮುಖ ದಿನಗಳನ್ನು ದತ್ತಾಂಶ ಆಧಾರದಲ್ಲಿ ಹೇಳುತ್ತಾ ಸಾಗಿದ್ದಾರೆ.

ಕೊರೊನಾ ವೈರಸ್‌ ಭಾರತದಲ್ಲಿ ಮೇ 21ಕ್ಕೆ ಶೇ.97ರಷ್ಟು ಅಂತ್ಯವಾಗಲಿದೆ ಎಂದು ಎಸ್‌ಯುಟಿಡಿ ಅಧ್ಯಯನ ಭವಿಷ್ಯ ನುಡಿದಿದೆ. ಎಸ್‌ಐಆರ್‌ ಮಾದರಿಯಲ್ಲಿ ವಿಶ್ವದ ದತ್ತಾಂಶವನ್ನು ಬಳಸಿಕೊಂಡು, ರೋಗ ಯಾವ ರೀತಿ ಜಾಗತಿಕವಾಗಿ ಹರಡಿದೆ ಎಂಬ ಆಧಾರದ ಮೇಲೆ ಎಸ್‌ಯುಟಿಡಿ ಸಂಶೋಧಕರು ಈ ಭವಿಷ್ಯವನ್ನು ನುಡಿದಿದ್ದಾರೆ. ಅದಲ್ಲದೇ ಈ ಭವಿಷ್ಯ ಕೇವಲ ಶೈಕ್ಷಣಿಕ ಮತ್ತು ಸಂಶೋಧನೆಗೆ ಮಾತ್ರ ಎಂದು ಅವರು ಹೇಳಿದ್ದಾರೆ.

ಶುಕ್ರವಾರ ಭಾರತ ಸರಕಾರವು ಮೇ 16ರವರೆಗೆ ಲಾಕ್‌ಡೌನ್‌ನ್ನು ವಿಸ್ತರಿಸಿದರೆ, ಭಾರತ ಕೊರೊನಾ ಮುಕ್ತ ಆಗಲಿದೆ ಎಂದು ಹೇಳಿತ್ತು. ಆದರೆ, ಭಾರತದಲ್ಲಿ ಕೊರೊನಾ ವೈರಸ್‌ ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಭಾನುವಾರ ಒಂದೇ ದಿನ ಹತ್ತಿರತ್ತಿರ 2000 ಕೊರೊನಾ ಪಾಸಿಟಿವ್‌ ಪ್ರಕರಣಗಳು ವರದಿಯಾಗಿವೆ.

ಇನ್ನು, ಎಸ್‌ಯುಟಿಡಿ ಸಂಶೋಧಕರ ಪ್ರಕಾರ ವಿಶ್ವದಲ್ಲಿ ಕೊರೊನಾ ವೈರಸ್‌ ಶೇ.97ರಷ್ಟು ಮೇ 29ಕ್ಕೆ ಕಡಿಮೆಯಾಗಲಿದ್ದು, ಡಿಸೆಂಬರ್‌ 8ಕ್ಕೆ ಸಂಪೂರ್ಣ ತೊಲಗಲಿದೆ ಎಂದು ಎಐ ಭವಿಷ್ಯ ನುಡಿದುದ್ದಾರೆ. ಯುಎಸ್‌ನಲ್ಲಿ ಮೇ 11, ಇಟಲಿಯಲ್ಲಿ ಮೇ 7, ಇರಾನ್‌ನಲ್ಲಿ ಮೇ 10, ಟರ್ಕಿ ಮೇ 15, ಇಂಗ್ಲೆಂಡ್‌ ಮೇ 9, ಸ್ಪೇನ್‌ ಮೇ 1, ಫ್ರಾನ್ಸ್‌ ಮೇ 3, ಜರ್ಮನಿ ಏಪ್ರಿಲ್ 30 ಹಾಗೂ ಕೆನಡಾ‌ ಮೇ 16ರಂದು ಶೇ.97 ರಷ್ಟು ಕೊರೊನಾ ಕಡಿಮೆಯಾಗಲಿದೆ ಎಂದಿದ್ದಾರೆ.

error: Content is protected !! Not allowed copy content from janadhvani.com