ದುಬೈ: ಮೆಟ್ರೋ ರೈಲು, ಸಾರ್ವಜನಿಕ ಬಸ್ಸುಗಳು ಮತ್ತು ಟ್ಯಾಕ್ಸಿ ಸೇವೆಗಳನ್ನು ಏ.26 ರಂದು ಪುನಃಸ್ಥಾಪಿಸಲಾಗುವುದು ಎಂದು ದುಬೈನ ರಸ್ತೆ ಮತ್ತು ಸಾರಿಗೆ ಪ್ರಾಧಿಕಾರ (ಆರ್ಟಿಎ) ಪ್ರಕಟಿಸಿದೆ.
ಬೆಳಗ್ಗೆ 7 ರಿಂದ ರಾತ್ರಿ 11 ರವರೆಗೆ ಮೆಟ್ರೋ ಸೇವೆ ಇರಲಿದ್ದು, ಪ್ರಯಾಣಿಕರ ಸಂಖ್ಯೆಗೆ ನಿರ್ಬಂಧವಿರಲಿದೆ.ಸುರಕ್ಷಿತ ಅಂತರವನ್ನು ಕಾಪಾಡಿ ಸಂಚರಿಸಲು ಸಾಧ್ಯವಾದಷ್ಟು ಜನರಿಗೆ ಮಾತ್ರ ರೈಲು ಪ್ರವೇಶಿಸಲು ಅವಕಾಶ ಕಲ್ಪಿಸಲಿದೆ.
ಪ್ರಯಾಣಿಕರು ಇತರರಿಂದ ದೈಹಿಕ ದೂರವನ್ನು ಕಾಪಾಡಿಕೊಳ್ಳುವುದು ಮತ್ತು ಮುಖವಾಡಗಳನ್ನು ಧರಿಸುವುದು ಸೇರಿದಂತೆ ಕೊರೋನಾ ತಡೆಗಟ್ಟುವ ಮತ್ತು ಪೂರ್ವಭಾವಿ ಆರೋಗ್ಯ ಕ್ರಮಗಳನ್ನು ಗಮನಿಸಬೇಕಾದರೂ, ದುಬೈ ಮೆಟ್ರೋ ಮತ್ತು ಸಾರ್ವಜನಿಕ ಬಸ್ ಸೇವೆಗಳನ್ನು ಭಾನುವಾರದಿಂದ ತಮ್ಮ ಸಾಮಾನ್ಯ ದರದಲ್ಲಿ ಪುನರಾರಂಭಿಸುವುದಾಗಿ ಆರ್ಟಿಎ ತಿಳಿಸಿದೆ.
ದುಬೈ ಟ್ಯಾಕ್ಸಿಗಳಲ್ಲಿಯೂ ಪ್ರಯಾಣಿಕರ ಸಂಖ್ಯೆಯನ್ನು ನಿಯಂತ್ರಿಸಲಾಗುವುದು.ಕೇವಲ ಎರಡು ಜನರಿಗೆ ಮಾತ್ರ ಟ್ಯಾಕ್ಸಿ ಹತ್ತಲು ಅವಕಾಶವಿದೆ. ರಾಷ್ಟ್ರೀಯ ಸೋಂಕು ನಿವಾರಣೆ ಕಾರ್ಯಕ್ರಮದ ಭಾಗವಾಗಿ ಮೆಟ್ರೋವನ್ನು ವಾರಗಳವರೆಗೆ ಸ್ಥಗಿತಗೊಳಿಸಲಾಗಿತ್ತು.






