janadhvani

Kannada Online News Paper

ರಮಝಾನ್‌ನಲ್ಲಿ ಒಂದು ಕೋಟಿ ಜನರಿಗೆ ಆಹಾರ ಯೋಜನೆ- ದುಬೈ ಶೈಖ್ ಘೋಷಣೆ

ದುಬೈ: ಪವಿತ್ರ ರಮಝಾನ್‌ನಲ್ಲಿ ಒಂದು ಕೋಟಿ ಜನರಿಗೆ ಆಹಾರವನ್ನು ಒದಗಿಸುವ ಯೋಜನೆಯನ್ನು ಪ್ರಕಟಿಸಿದೆ. ‘ಟೆನ್ ಮಿಲಿಯನ್ ಮೀಲ್ಸ್ ‘ ಎಂಬ ಶೀರ್ಷಿಕೆಯ ಯೋಜನೆಯನ್ನು ಯುಎಇ ಉಪಾಧ್ಯಕ್ಷ, ಪ್ರಧಾನಿ ಮತ್ತು ದುಬೈ ಆಡಳಿತಗಾರ ಶೈಖ್ ಮುಹಮ್ಮದ್ ಬಿನ್ ರಾಷಿದ್ ಆಲ್ ಮಕ್ತೂಂ ಘೋಷಿಸಿದ್ದಾರೆ.

ಶೈಖ ಹಿಂದ್ ಬಿಂತ್ ಮಕ್ತೂಮ್ ಈ ಯೋಜನೆಯ ಉಸ್ತುವಾರಿ ವಹಿಸಲಿದ್ದು, ವ್ಯಕ್ತಿಗಳು ಅಥವಾ ಕುಟುಂಬಗಳೇ ಆಗಿರಲಿ, ಅಗತ್ಯವಿರುವವರಿಗೆ ಒಂದು ಕೋಟಿ ಆಹಾರ ಪೊಟ್ಟಣಗಳನ್ನು ತಲುಪಿಸುವ ಯೋಜನೆಯನ್ನು ನೋಡಿಕೊಳ್ಳಲಿದ್ದಾರೆ. ಜಗತ್ತು ಬಿಕ್ಕಟ್ಟನ್ನು ಎದುರಿಸುತ್ತಿರುವ ಕಾರಣ ರಮಝಾನ್ ಸಮಯದಲ್ಲಿ ಆಹಾರವನ್ನು ಪೂರೈಸುವುದು ಅತ್ಯಂತ ಮಾನವೀಯ ಕಾರ್ಯವಾಗಿದ್ದು, ಆ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ ಎಂದು ಶೈಖ್ ಮುಹಮ್ಮದ್ ಬಿನ್ ರಾಶಿದ್ ಆಲ್ ಮಕ್ತೂಮ್ ಹೇಳಿದರು.

ದೇಶದಲ್ಲಿ ಯಾರೂ ಹಸಿವಿನಿಂದ ಇರಲಾರರು. ಯಾರೂ ಸಹಾಯಕರಿಲ್ಲದೆ ಒಬ್ಬನೇಯೊಬ್ಬ ರೋಗಿಯೋ, ಮುಗ್ದರೋ,ಅಸಹಾಯಕರೋ ದೇಶದಲ್ಲಿ ಹಸಿವಿನಿಂದ ಇರಬಾರದು. ಈ ಧ್ಯೇಯ ಮತ್ತು ಜವಾಬ್ದಾರಿ ದೇಶದ ಧ್ವನಿಯಾಗಿರಬೇಕು ಎಂದು ಶೈಖ್ ಮುಹಮ್ಮದ್ ಹೇಳಿದರು.

ಯುಎಇಯ ಟೆಲಿಕಾಂ ಕಂಪೆನಿಗಳು ಎಸ್‌ಎಂಎಸ್ ಮೂಲಕ ಊಟವನ್ನು ಪ್ರಾಯೋಜಿಸುವ ಯೋಜನೆಯನ್ನು ಕೂಡ ಪ್ರಾರಂಭಿಸಿವೆ. ಈ ಯೋಜನೆಯನ್ನು ದೇಶವು ಕಂಡ ಅತಿದೊಡ್ಡ ಸಾಮಾಜಿಕ ಉದ್ಯಮಗಳಲ್ಲಿ ಒಂದಾಗಿ ರೂಪಾಂತರಗೊಳಿಸಲು ದೇಶವು ಸಿದ್ಧತೆ ನಡೆಸುತ್ತಿದೆ.