janadhvani

Kannada Online News Paper

ಕೋವಿಡ್ ಗೆ ಬಲಿಯಾದ ಅನಿವಾಸಿ ಕುಟುಂಬಕ್ಕೆ ಎಮಿರೇಟ್ಸ್ ರೆಡ್ ಕ್ರೆಸೆಂಟ್ ಆಸರೆ

ದುಬೈ: ಯುಎಇಯಲ್ಲಿ ಕೋವಿಡ್ ಮೂಲಕ ಮೃತಪ್ಪಡುವ ಅನಿವಾಸಿ ಕುಟುಂಬದ ಮೂಲ ವೆಚ್ಚವನ್ನು ಎಮಿರೇಟ್ಸ್ ರೆಡ್ ಕ್ರೆಸೆಂಟ್ ಭರಿಸಲಿದೆ.

ಶೈಖ್ ಹಂದಾನ್ ಬಿನ್ ಝಾಯಿದ್ ಆಲ್ ನಹ್ಯಾನ್ ಅವರ ನಿರ್ದೇಶನದ ಮೇರೆಗೆ ಈ ನಡೆ ಎನ್ನಲಾಗಿದೆ.

ಕುಟುಂಬವು ಯುಎಇಯಲ್ಲಿ ಇದ್ದರೆ ಎಲ್ಲಾ ದೇಶದವರಿಗೂ ಈ ಯೋಜನೆ ಅನ್ವಯವಾಗಲಿದೆ ಎಂದು ಯುಎಇ ಸರಕಾರದ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಸ್ಪಷ್ಟಪಡಿಸಿದೆ.

ನೀವು ಕುಟುಂಬದ ಓರ್ವರು’ ಎನ್ನುವ ಯೋಜನೆಯ ಭಾಗವಾಗಿ ಕುಟುಂಬಕ್ಕೆ ಸಂರಕ್ಷಣೆ ಲಭಿಸಲಿದೆ.