janadhvani

Kannada Online News Paper

ಸಂಕಷ್ಟಕ್ಕೀಡಾದ ಭಾಯತೀಯರನ್ನು ಕೂಡಲೇ ಕರೆತರಲು ಕ್ರಮ ಕೈಗೊಳ್ಳಬೇಕು- ಜಿಫ್ರಿ ತಂಙಳ್

ಕೋಝಿಕ್ಕೋಡ್: ಕೊರೋನಾ ಕಾಯಿಲೆಗಳಿಂದಾಗಿ ವಿದೇಶದಲ್ಲಿ ವಾಸಿಸುವುದು ಅಸಾಧ್ಯವಾದ ಭಾರತೀಯರನ್ನು ಆದಷ್ಟು ಬೇಗ ವಾಪಸ್ ಕರೆತಂದು ಉತ್ತಮ ಚಿಕಿತ್ಸೆ ಒದಗಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಸಮಸ್ತದ ಅಧ್ಯಕ್ಷ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಹೇಳಿದ್ದಾರೆ.

ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಕೇರಳವು ಯಶಸ್ಸಿನೊಂದಿಗೆ ಮುನ್ನುಗ್ಗುವಾಗ, ನಮ್ಮ ದೇಶದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ ವಲಸಿಗರು ಸಂಪೂರ್ಣವಾಗಿ ಸುರಕ್ಷಿತವಾಗಿಲ್ಲ ಎಂಬ ವರದಿಗಳು ಬರುತ್ತಾ ಇವೆ. ಅರಬ್ ಆಡಳಿತಗಾರರು ಕೋವಿಡ್ ತಡೆಗಟ್ಟುವ ಉತ್ತಮ ಕ್ರಮಗಳನ್ನು ಮಾಡುತ್ತಿದ್ದರೂ, ವಿವಿಧ ದೇಶಗಳ ನಾಗರಿಕರು ಒಂದಾಗಿ ಕೆಲಸ ಮಾಡುತ್ತಿರುವ ಗಲ್ಫ್ ರಾಷ್ಟ್ರಗಳಲ್ಲಿ ಈ ರೋಗ ಇನ್ನೂ ಹರಡುತ್ತಿದೆ.

ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡುವ ಭಾರತೀಯರಲ್ಲಿ ಹೆಚ್ಚಿನವರು ಕೇರಳೀಯರು. ಪ್ರವಾಹದ ಸಂದರ್ಭದಲ್ಲಿ ನಮ್ಮ ನಾಡನ್ನು ಉಳಿಸುವಲ್ಲಿ ಕಠಿಣ ಪ್ರಯತ್ನ ಪಟ್ಟವರಾದ ವಲಸಿಗರನ್ನು ಈ ಹಂತದಲ್ಲಿ ಮರಳಿ ಊರಿಗೆ ಕರೆತರುವುದು ಮತ್ತು ಅವರಿಗೆ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆಯನ್ನು ನೀಡುವುದು ನಮ್ಮ ಕರ್ತವ್ಯವಾಗಿದೆ ಎಂದು ತಂಙಳ್ ತಿಳಿಸಿದ್ದಾರೆ.

ಇತರ ಹಲವು ದೇಶಗಳು ತಮ್ಮ ನಾಗರಿಕರನ್ನು ವಾಪಸ್ ತರಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿರುವಾಗ ನಮ್ಮ ಸರ್ಕಾರಗಳು ಇಂತಹ ಕ್ರಮಗಳನ್ನು ಪ್ರಾರಂಭಿಸದಿರುವುದು ವಿಷಾಧಕರ ಎಂದು ಜಿಫ್ರಿ ತಂಙಳ್ ಹೇಳಿದರು.