ರಿಯಾದ್: ಈ ವರ್ಷ ಹಜ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸೌದಿ ಹಜ್ ಉಮ್ರಾ ಸಚಿವಾಲಯ ಹೇಳಿದೆ. ವಿಶ್ವಾಸಿಗಳನ್ನು ಸ್ವೀಕರಿಸಲು ದೇಶವು ಸಜ್ಜವಾಗಿದೆ. ಆದರೆ ಕೋವಿಡ್‌ನ ಪರಿಸ್ಥಿತಿ ಮುಂದುವರಿಕೆ ಅನುಸರಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹಜ್ ಉಮ್ರಾ ಖಾತೆಯ ಸಚಿವ ಮುಹಮ್ಮದ್ ಸಾಲಿಹ್ ಬಂದನ್ ಹೇಳಿದರು. ಕೋವಿಡ್ ಅನಿಶ್ಚಿತತೆ ಇತ್ಯರ್ಥವಾಗುವ ತನಕ ಒಪ್ಪಂದಗಳಿಗೆ ತರಾತುರಿಯಲ್ಲಿ ಸಹಿ ಮಾಡದಂತೆ ಸಚಿವಾಲಯವು ವಿವಿಧ ಕಂಪನಿಗಳಿಗೆ ಮಾಹಿತಿ ನೀಡಿದೆ.
ಈ ವರ್ಷದ ಆರಂಭದಲ್ಲಿ, ಹಜ್ ನಿಲ್ಲಿಸಲಾಗಿದೆ ಎಂದು ಕೆಲವು ಸುಳ್ಳು ವದಂತಿಗಳು ಹಬ್ಬಿದ್ದವು. ಜುಲೈ ಕೊನೆಯ ವಾರದಲ್ಲಿ ಹಜ್ ನಡೆಯಲಿದೆ. ಏತನ್ಮಧ್ಯೆ, ಮೇ ಕೊನೆಯ ವಾರದಲ್ಲಿ, ವಿಮಾನಯಾನ ಸಂಸ್ಥೆಗಳು ಉಮ್ರಾ ಗುಂಪುಗಳಿಗೆ ವಿಮಾನ ಕಾಯ್ದಿರಿಸುವಿಕೆಯನ್ನು ನಿಲ್ಲಿಸಿವೆ. ಸೌದಿ ಅರೇಬಿಯಾದ ಅಧಿಕೃತ ವಿಮಾನಯಾನ ಸಂಸ್ಥೆಯಾದ ಸೌದಿ ಏರ್ಲೈನ್ಸ್ ಮೇ ಅಂತ್ಯದವರೆಗೆ ಬುಕಿಂಗ್ ನಿಲ್ಲಿಸುವುದಾಗಿ ಘೋಷಿಸಿದೆ.
ಇಲ್ಲಿಯವರೆಗೆ ಬುಕ್ ಮಾಡಿದ ಗ್ರೂಪ್ ಮತ್ತು ವ್ಯಕ್ತಿಗಳಿಗೆ ಹಣವನ್ನು ಹಿಂದಿರುಗಿಸುವುದಾಗಿ ವಿಮಾನಯಾನ ಸಂಸ್ಥೆ ತಿಳಿಸಿದೆ. ವಿಶ್ವದ ಕೋವಿಡ್ 19 ಪರಿಸ್ಥಿತಿ ಬದಲಾಗುವ ಆಧಾರದ ಮೇಲೆ ನಿರ್ಧಾರ ತೆಗೆದು ಕೊಳ್ಳಲಾಗುವುದು.
ಏಪ್ರಿಲ್ 15 ರವರೆಗೆ ವಿವಿಧ ಗುಂಪುಗಳಿಗೆ ನಿಯಮಿತವಾಗಿ ಬುಕಿಂಗ್ ನಿಲ್ಲಿಸಲಾಗಿದೆ. ಇಲ್ಲಿಯವರೆಗೆ ಬುಕ್ ಮಾಡಿದವರಿಗೆ ಮರುಪಾವತಿ ಮಾಡಲಾಗುತ್ತದೆ. ಉಮ್ರಾ ನಿರ್ವಹಣೆಗಾಗಿ ಬಂದು ಮರಳಲಾಗದೆ ಉಳಿದುಕೊಂಡ 1,200 ಮಂದಿ ಆರೋಗ್ಯ ಸಚಿವಾಲಯದ ಆಶ್ರಯದಲ್ಲಿ ದೇಶದಲ್ಲಿದ್ದಾರೆ. ವಿಮಾನ ಯಾನ ಪ್ರಾರಂಭವಾದಂತೆ ಅವರನ್ನು ವಾಪಸ್ ಕಳುಹಿಸಲಾಗುತ್ತದೆ. ಹಣ ಪಾವತಿಸಿ ಉಮ್ರಾ ನಿರ್ವಹಿಸಲು ಸಾಧ್ಯವಾಗದವರಿಗೆ ಈಗಾಗಲೇ ಮರು ಪಾವತಿ ಮಾಡಲಾಗಿದೆ ಎಂದು ಹಜ್ ಉಮ್ರಾ ಸಚಿವಾಲಯ ತಿಳಿಸಿದೆ.