ನ್ಯೂಯಾರ್ಕ್ ,ಮಾ.27:ವಿಶ್ವಾದ್ಯಂತ ಆರ್ಭಟವನ್ನು ಮುಂದುವರಿಸಿದ ಕೊರೋನಾ ವೈರಸ್ಗೆ ಅಮೆರಿಕ ಅಕ್ಷರಶಃ ನಲುಗಿದೆ. ವಿಶ್ವದ ಮುಂದುವರಿದ ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿದ್ದರೂ ಕೊರೋನಾ ವೈರಸ್ ತಡೆಯಲು ಮಾತ್ರ ಅಮೆರಿಕದ ಬಳಿ ಸಾಧ್ಯವಾಗುತ್ತಿಲ್ಲ. ಪರಿಣಾಮ ಗುರುವಾರ ಒಂದೇ ದಿನ ಅಮೆರಿಕದಲ್ಲಿ 10 ಸಾವಿರ ಪ್ರಕರಣ ದಾಖಲಾಗಿದೆ.
ದೇಶವೊಂದರಲ್ಲಿ ಒಂದೇ ದಿನ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಕೊರೋನಾ ವೈರಸ್ ಪ್ರಕರಣ ದಾಖಲಾಗಿದ್ದು ವಿಶ್ವದಲ್ಲಿ ಇದೇ ಮೊದಲು ಎನ್ನಲಾಗಿದೆ. ಈ ಮೂಲಕ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 85,327ಕ್ಕೆ ಏರಿಕೆ ಆಗಿದೆ. ನಿನ್ನೆ ಒಂದೇ ದಿನ ಅಮೆರಿಕದಲ್ಲಿ 220 ಜನರು ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ1,293ಕ್ಕೆ ಏರಿಕೆ ಆಗಿದೆ.
ಶಾಕಿಂಗ್ ವಿಚಾರ ಏನೆಂದರೆ ಕೊರೋನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಅಮೆರಿಕ ಚೀನಾ ಹಾಗೂ ಇಟಲಿಯನ್ನು ಹಿಂದಿಕ್ಕಿದೆ. ಇದು ಅಲ್ಲಿನ ಜನತೆಯಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಅಲ್ಲದೆ, ಮುಂದಿನ ದಿನಗಖಳಲ್ಲಿ ಮತ್ತಷ್ಟು ಸಾವು ಸಂಭವಿಸಬಹುದು ಎಂದು ಅಮೆರಿಕ ಅಭಿಪ್ರಾಯ ಪಟ್ಟಿದೆ.
ಇನ್ನು, ಇಟಲಿಯಲ್ಲಿ ಸದ್ಯದ ಮಟ್ಟಿಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬರುವ ಲಕ್ಷಣ ಗೋಚರವಾಗುತ್ತಿಲ್ಲ. ಬುಧವಾರ ಒಂದೇ ದಿನ ಇಟಲಿಯಲ್ಲಿ 712 ಜನರು ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 8,215ಕ್ಕೆ ಏರಿಕೆ ಆಗಿದೆ. ಒಟ್ಟು 80 ಸಾವಿರ ಕೊರೋನಾ ಸೋಂಕಿತರಿದ್ದಾರೆ. ಸಾವಿನ ಸಂಖ್ಯೆಯಲ್ಲಿ ಸ್ಪೇನ್ ಚೀನಾವನ್ನು ಹಿಂದಿಕ್ಕಿದೆ. ಸ್ಪೇನ್ನಲ್ಲಿ ಈವರೆಗೆ 4365 ಸಾವುಗಳು ಸಂಭವಿಸಿವೆ. ಇನ್ನು, ಕೊರೋನಾ ಪೀಡಿತರ ಸಂಖ್ಯೆ 57 ಸಾವಿರದ ಗಡಿ ದಾಟಿದೆ.