janadhvani

Kannada Online News Paper

ಖತರ್: 18 ಸಾವಿರ ಹಾಸಿಗೆಗಳ ಬೃಹತ್ ‘ಕೋವಿಡ್-19’ ಚಿಕಿತ್ಸಾ ಕೇಂದ್ರ

ದೋಹಾ: ಖತರ್‌ನ ಉಂಸಲಾಲ್‌ ನಲ್ಲಿ ಅಲ್ಲಿನ ಆರೋಗ್ಯ ಸಚಿವಾಲಯವು ವಿವಿಧ ವಿಭಾಗಗಳ ಜಂಟಿಯಾಶ್ರಯದಲ್ಲಿ ಬೃಹತ್ ಕೋವಿಡ್ ಚಿಕಿತ್ಸಾ ಕೇಂದ್ರವನ್ನು ಪ್ರಾರಂಭಿಸಿದೆ.

ಮೊದಲ ಹಂತದಲ್ಲಿ ನಾಲ್ಕು ಸಾವಿರ ಹಾಸಿಗೆಗಳಿದ್ದು, ಮುಂದಿನ ವಾರದ ವೇಳೆಗೆ ಎಂಟು ಸಾವಿರ ಹಾಸಿಗೆಗಳು ಸಜ್ಜುಗೊಳ್ಳಲಿವೆ. ಮುಂಬರುವ ವಾರಗಳಲ್ಲಿ, ಮೂವತ್ತೆರಡು ಕಟ್ಟಡಗಳಲ್ಲಿ 18,000 ರೋಗಿಗಳಿಗೆ ಬೇಕಾಗುವಷ್ಟು ಹಾಸಿಗೆಗಳನ್ನು ಸ್ಥಾಪಿಸಲಾಗುವುದು. ಇಲ್ಲಿ ಅತ್ಯುತ್ತಮ ವೈದ್ಯಕೀಯ ಆರೈಕೆ ಮತ್ತು ಪರಿಚರಣೆಯನ್ನು ಒದಗಿಸಲಾಗುತ್ತದೆ.

ದೇಶದಲ್ಲಿ ಕೋವಿಡ್ ಪೀಡಿತರ ಸಂಖ್ಯೆಯು ತೀವ್ರವಾಗಿ ಹೆಚ್ಚಾದ ಕಾರಣ ಚಿಕಿತ್ಸಾ ಕೇಂದ್ರವನ್ನು ತೆರೆಯಲು ಆರೋಗ್ಯ ಸಚಿವಾಲಯ ನಿರ್ಧರಿಸಿದೆ.

ಆರೋಗ್ಯ ಸಚಿವರಾದ ಡಾ.ಹನಾನ್ ಮುಹಮ್ಮದ್ ಅಲ್-ಕುವಾರಿ ನೇತೃತ್ವದ ಉನ್ನತ ಮಟ್ಟದ ನಿಯೋಗ ಇಂದು ಕೇಂದ್ರಕ್ಕೆ ಭೇಟಿ ನೀಡಿ ಕಾರ್ಯಾಚರಣೆಯ ಪ್ರಗತಿಯನ್ನು ಪರಿಶೀಲಿಸಿದೆ.

ಕೋವಿಡ್ ವಿರುದ್ಧ ಹೋರಾಡುತ್ತಿರುವ ದೇಶದ ಆರೋಗ್ಯ ಕ್ಷೇತ್ರದ ಸಿಬ್ಬಂದಿಯನ್ನು ಸಚಿವರು ಈ ವೇಳೆ ಅಭಿನಂದಿಸಿದರು.