ರಿಯಾದ್: ಉಮ್ರಾ ಯಾತ್ರೆಯ ನಂತರ ತಾಯ್ನಾಡಿಗೆ ಮರಳಲು ಸಾಧ್ಯವಾಗದವರಿಗೆ ಪರಿಹಾರವಾಗಿ ಸೌದಿ ಪಾಸ್‌ಪೋರ್ಟ್ ಸಚಿವಾಲಯ ಮಹತ್ತರ ತೀರ್ಮಾನ ಕೈಗೊಂಡಿದೆ.
ವಿಮಾನ ಸೇವೆಗಳು ಸ್ಥಿಗಿತಗೊಂಡ ಕಾರಣ ಸೌದಿಯಲ್ಲಿ ಉಳಿಯಬೇಕಾಗಿ ಬಂದವರು ದಂಡ ಪಾವತಿಸಬೇಕಾಗಿಲ್ಲ ಅಂತವರಿಗೆ ವಿಶೇಷ ವಿನಾಯಿತಿ ನೀಡಲಾಗುವುದು ಎಂದು ಸೌದಿ ಜನರಲ್ ಪಾಸ್‌ಪೋರ್ಟ್ ಪ್ರಾಧಿಕಾರ ತಿಳಿಸಿದೆ.
ಈ ಉದ್ದೇಶಕ್ಕಾಗಿ, ಈಗಾಗಲೇ ಹಜ್ ಸಚಿವಾಲಯದ ಸಹಾಯದಿಂದ ಉಮ್ರಾ ವೀಸಾ ಮುಕ್ತಾಯಗೊಂಡವರು ಕಾನೂನು ಪರಿಣಾಮಗಳು ಮತ್ತು ಹಣಕಾಸಿನ ದಂಡವನ್ನು ತಪ್ಪಿಸಲು ಮಾರ್ಚ್ 28ರ ಒಳಗೆ ಸಚಿವಾಲಯದ ಆನ್‌ಲೈನ್ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕು.
ನೋಂದಣಿ ಪೂರ್ಣಗೊಂಡ ನಂತರ, ಅವರಿಗೆ ತಾಯ್ನಾಡಿಗೆ ಮರಳುವ ಸೇವೆಗಳನ್ನು ಒದಗಿಸಲಾಗುತ್ತದೆ.
ಯಾತ್ರಿಕರಿಗೆ ತಮ್ಮ ವಿಮಾನ ವೇಳಾಪಟ್ಟಿಗಳ ವಿವರಗಳನ್ನು ಅವರ ನೋಂದಾಯಿತ ಮೊಬೈಲ್ ಫೋನ್ ಸಂಖ್ಯೆಗಳಿಗೆ ಕಳುಹಿಸಲಾಗುವುದು ಎಂದು ಪಾಸ್‌ಪೋರ್ಟ್ ಸಚಿವಾಲಯ ತಿಳಿಸಿದೆ.