janadhvani

Kannada Online News Paper

ಭಾರತದಲ್ಲಿ COVID’19 ಗೆ 15 ಮಂದಿ ಬಲಿ- ಸೋಂಕಿತರ ಸಂಖ್ಯೆ 649 ಕ್ಕೆ ಏರಿಕೆ

ನವದೆಹಲಿ ,ಮಾ.26: ವಿಶ್ವಾದ್ಯಂತ ಸಾವಿರಾರು ಜನರನ್ನು ಬಲಿಪಡೆದಿರುವ covid-19 ಅಬ್ಬರಕ್ಕೆ ಭಾರತವೂ ತುತ್ತಾಗಿದ್ದು, ಮೃತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂದು ಕೋರೋನಾ ವೈರಸ್​ನಿಂದಾಗಿ ಮತ್ತೆರಡುಮಂದಿ ಮೃತಪಟ್ಟಿದ್ದು, ಈ ಮೂಲಕ ಭಾರತದಲ್ಲಿ ಮೃತರ ಸಂಖ್ಯೆ 15ಕ್ಕೆ ಏರಿಕೆ ಆಗಿದೆ. ಕೊರೋನಾ ಸೋಂಕಿತರ ಸಂಖ್ಯೆ 649 ಆಗಿದೆ.

65 ವರ್ಷದ ಶ್ರೀನಗರದ ವೃದ್ಧೆಗೆ ಕೊರೋನಾ ವೈರಸ್​ ಇರುವುದು ದೃಢಪಟ್ಟಿತ್ತು. ಈ ವೃದ್ಧೆ ಇಂದು ಮುಂಜಾನೆ ಅಸುನೀಗಿದ್ದಾರೆ. ಈ ಮೂಲಕ ಶ್ರೀನಗರದಲ್ಲಿ ಇದೇ ಮೊದಲ ಕೊರೋನಾ ಮರಣ ಸಂಭವಿಸಿದೆ. ಇನ್ನು, ನವಿ ಮುಂಬೈನ ವ್ಯಕ್ತಿ ಕೂಡ ಕೊರೋನಾ ವೈರಸ್​ಗೆ ಬಲಿಯಾಗಿದ್ದಾನೆ.ಭಾರತದಲ್ಲಿ ಈಗಾಗಲೇ 649 ಜನರಿಗೆ ಕೊರೋನಾ ಸೋಂಕು ತಗುಲಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗಿದೆ. ಆದರೂ, ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ.

ಈವರೆಗೆ ವಿಶ್ವದಲ್ಲಿ ಒಟ್ಟು 21,363 ಜನರು ಮೃತಪಟ್ಟಿದ್ದಾರೆ. ಈ ಪೈಕಿ ಯುರೋಪ್​ ರಾಷ್ಟ್ರವೊಂದರಲ್ಲೇ 14 ಸಾವಿರಕ್ಕೂ ಅಧಿಕ ಜನರು ಅಸುನೀಗಿದ್ದಾರೆ. ಚೀನಾದಲ್ಲಿ ಸದ್ಯ, ಕೊರೋನಾ ವೈರಸ್​ ಅಟ್ಟಹಾಸ ನಿಯಂತ್ರಣಕ್ಕೆ ಬಂದಿದೆ. ಈವರೆಗೆ ಚೀನಾದಲ್ಲಿ 3,281 ಜನರು ಬಲಿಯಾಗಿದ್ದಾರೆ.

ಇನ್ನು, ಇಟಲಿಯಲ್ಲಿ ಸದ್ಯದ ಮಟ್ಟಿಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬರು ಲಕ್ಷಣ ಗೋಚರವಾಗುತ್ತಿಲ್ಲ. ಈಗಾಗಲೇ ಇಟಲಿಯಲ್ಲಿ ಕೊರೋನಾ ವೈರಸ್​ಗೆ 7,503 ಜನರು ಬಲಿಯಾಗಿದ್ದಾರೆ. ಒಟ್ಟು 74 ಸಾವಿರ ಕೊರೋನಾ ಸೋಂಕಿತರಿದ್ದಾರೆ. ಸಾವಿನ ಸಂಖ್ಯೆಯಲ್ಲಿ ಸ್ಪೇನ್​ ಚೀನಾವನ್ನು ಹಿಂದಿಕ್ಕಿದೆ. ಸ್ಪೇನ್​ನಲ್ಲಿ ಈವರೆಗೆ 3,647 ಸಾವುಗಳು ಸಂಭವಿಸಿವೆ. ಇನ್ನು, ಕೊರೋನಾ ಪೀಡಿತರ ಸಂಖ್ಯೆ 50 ಸಾವಿರದ ಗಡಿ ಸಮೀಪಿಸಿದೆ.

error: Content is protected !! Not allowed copy content from janadhvani.com