ರಿಯಾದ್: ಇದು ವರೆಗೂ ಸೌದಿಗೆ ಮರಳಲು ಸಾಧ್ಯವಾಗದವರಿಗೆ ಅಧಿಕೃತ ರಜೆ ನೀಡುವುದಾಗಿ ಅಲ್ಲಿನ ಗೃಹ ಸಚಿವಾಲಯ ತಿಳಿಸಿದೆ. ವಿಮಾನ ಕಂಪೆನಿಗಳು ತನ್ನ ಸೇವೆಯನ್ನು ಸ್ಥಗಿತಗೊಳಿಸಿರುವ ಕಾರಣದಿಂದಾಗಿ ಮರಳಲು ಸಾಧ್ಯವಾಗದವರಿಗೆ ಈ ಸೌಲಭ್ಯ ಲಭ್ಯವಾಗಲಿದೆ.ಕೋವಿಡ್ 19 ರ ಹರಡುವಿಕೆಯನ್ನು ತಡೆಗಟ್ಟುವ ಭಾಗವಾಗಿ ಈ ಕ್ರಮ ಎನ್ನಲಾಗಿದೆ.
ಸೌದಿಯಿಂದ ಎಲ್ಲಾ ಅಂತರ್‌ರಾಷ್ಟ್ರೀಯ ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಭಾರತ ಸೇರಿದಂತೆ ಕೆಲವು ದೇಶಗಳ ಜನರಿಗೆ 72 ಗಂಟೆಗಳ ಕಾಲ ಮರಳಲು ಅವಕಾಶ ನೀಡಲಾಗಿತ್ತು. ಆ ಸಮಯಾವಕಾಶ ಮುಗಿದಿರುವ ಹಿನ್ನೆಲೆಯಲ್ಲಿ ಇನ್ನೂ ಮರಳದವರಿಗೆ ಅಧಿಕೃತ ರಜೆ ನೀಡಲು ನಿರ್ಧರಿಸಲಾಗಿದೆ.
ಈ ಪ್ರಯೋಜನವನ್ನು 14 ದಿನಗಳವರೆಗೆ ನೀಡಲಾಗುತ್ತದೆ. ಮಾರ್ಚ್ 15ರಿಂದ 30ರವರೆಗೆ ಅಧಿಕೃತ ರಜೆ ದೊರೆಯಲಿದೆ. ಮಾರ್ಚ್ 15ರ ನಂತರ, ಸೌದಿ ನಿವಾಸಿಗಳು ಮತ್ತು ವಿದೇಶಿಯರಿಗೆ ತುರ್ತು ಸಂದರ್ಭಗಳಲ್ಲಿ ಮಾತ್ರ ಸೌದಿಗೆ ಪ್ರವೇಶಿಸಲು ಅವಕಾಶವಿರುತ್ತದೆ.