ರಿಯಾದ್: ಸೌದಿ ಅರೇಬಿಯಾ ದಲ್ಲೂ ಒಬ್ಬ ವ್ಯಕ್ತಿಗೆ ರೋಗ ಪತ್ತೆಯಾಗಿದ್ದು, ಈ ಮೂಲಕ ಕೊಲ್ಲಿ ರಾಷ್ಟ್ರಗಳೆಲ್ಲವೂ ಕೋವಿಡ್ 19ಗೆ ತುತ್ತಾಗಿದೆ. ಕುವೈತ್‌ನಲ್ಲಿ 10 ರೋಗಿಗಳು, ಖತರ್‌ನಲ್ಲಿ ನಾಲ್ಕು ಮತ್ತು ಬಹ್ರೈನ್‌ನಲ್ಲಿ ಇಬ್ಬರಿಗೆ ಸೋಂಕು ತಗುಲಿದ ಬಗ್ಗೆ ನಿನ್ನೆ ಖಚಿತಪಡಿಸಲಾಗಿದೆ. 66 ಜನರು ಸಾವನ್ನಪ್ಪಿದ ಇರಾನ್‌ನಲ್ಲಿ 1,000 ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ ಬಗ್ಗೆ ಖಚಿತಪಡಿಸಲಾಗಿದೆ
ಕುವೈತ್‌ನಲ್ಲಿ 56, ಬಹ್ರೈನ್‌ನಲ್ಲಿ 49, ಯುಎಇಯಲ್ಲಿ 21, ಖತರ್‌ನಲ್ಲಿ 7, ಒಮಾನ್‌ನಲ್ಲಿ 6 ಮತ್ತು ಸೌದಿಯಲ್ಲಿ ಒಬ್ಬರಿಗೆ ಕೋವಿಡ್ 19 ದೃಢೀಕರಿಸಿದೆ. ಹೆಚ್ಚಿನ ರೋಗಿಗಳು ಇರಾನ್‌ಗೆ ಸಂದರ್ಶನ ನೀಡಿದವರು ಎನ್ನಲಾಗಿದೆ. ಇರಾನ್‌ನಲ್ಲಿ ರೋಗ ಹರಡಿರುವುದರೊಂದಿಗೆ, ಕೊಲ್ಲಿ ರಾಷ್ಟ್ರಗಳಲ್ಲಿ ತುರ್ತು ಪರಿಸ್ಥಿತಿಯನ್ನು ಎದುರಿಸಲು ತಯಾರಿ ನಡೆಸಲಾಗುತ್ತಿವೆ. ಈ ವಾರ ಪರಿಸ್ಥಿತಿ ಇನ್ನೂ ಹದಗೆಡುವ ಸಾಧ್ಯತೆ ಇದೆ.
ಜನರು ಸಾಮೂಹಿಕವಾಗಿ ಸೇರುವುದನ್ನು ತಪ್ಪಿಸಬೇಕು ಎಂಬ ಸಲಹೆಯ ನಂತರ ಹಲವಾರು ಕ್ರೀಡಾಕೂಟಗಳು ಸೇರಿದಂತೆ ಅಸಂಖ್ಯಾತ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಮಾರ್ಚ್ 10 ರಿಂದ 14 ರವರೆಗೆ ದುಬೈ ಬಂದರಿನಲ್ಲಿ ನಡೆಯಲಿರುವ ದೋಣಿ ಪ್ರದರ್ಶನವನ್ನು ನವೆಂಬರ್‌ಗೆ ಮುಂದೂಡಲಾಗಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆಯನ್ನೂ ಮುಂದೂಡಲಾಗಿದೆ.
ಕೋವಿಡ್ 19 ಕೊಲ್ಲಿ ಆರ್ಥಿಕತೆಯ ಮೇಲೆ ನಿರೀಕ್ಷೆಗಿಂತ ಹೆಚ್ಚಿನ ಪರಿಣಾಮ ಬೀರಬಹುದು ಎಂದು ಅರ್ಥಶಾಸ್ತ್ರಜ್ಞರು ಎಚ್ಚರಿಸಿದ್ದಾರೆ. ನಿರಂತರ ತೈಲ ಬೆಲೆ ಕುಸಿತಗಳು ಕೊಲ್ಲಿ ಆರ್ಥಿಕತೆಯನ್ನು ಇನ್ನಷ್ಟು ಹದಗೆಡಿಸಬಹುದು ಎನ್ನಲಾಗಿದೆ.