janadhvani

Kannada Online News Paper

ಎಸ್ಸೆಸ್ಸೆಫ್ ಚಿಕ್ಕಮಗಳೂರು ಡಿವಿಷನ್: ಪ್ರವಾದಿ ನಿಂದನೆ ವಿರುದ್ಧ ದೂರು ದಾಖಲು

ಚಿಕ್ಕಮಗಳೂರು: ಮಧುಗಿರಿಯ ಅತುಲ್ ಕುಮಾರ್ ಎಂಬಾತ ಮಧುಗಿರಿ ಮೋದಿ ಎಂಬ ಹೆಸರಿನಲ್ಲಿ, ಮುಸ್ಲಿಮ್ ಧರ್ಮದ ಪ್ರವಾದಿ ಮುಹಮ್ಮದ್ ಪೈಗಂಬರ್ (ಸ.ಅ) ರವರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಡಿವಿಷನ್ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್‌ (ಎಸ್ಸೆಸ್ಸೆಫ್) ನಾಯಕರು, ಚಿಕ್ಕಮಗಳೂರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಅವರನ್ನು, ಅವರ ಕಛೇರಿಯಲ್ಲಿ ಭೇಟಿಯಾಗಿ ದೂರು ದಾಖಲು ಮಾಡಲು ಮನವಿಯನ್ನು ಸಲ್ಲಿಸಿತು.

ವಿಶ್ವದ ಮುಸ್ಲಿಮ್ ಧರ್ಮವನ್ನು ಕೆರಳಿಸುವ ಕೆಲಸ ಮಾಡಿರುವ ಇವನನ್ನು ಶಾಶ್ವತವಾಗಿ ಬಂಧಿಸಬೇಕೆಂದು ಆಗ್ರಹಿಸಿತು. ದೂರು ಸ್ವೀಕರಿಸಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಅವರು ಸೂಕ್ತ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಅಧ್ಯಕ್ಷರಾದ ಮುನೀರ್ ಶಾಂತಿನಗರ, ಡಿವಿಷನ್ ಅಧ್ಯಕ್ಷರಾದ ಮುಸ್ತಫ ಝುಹ್ರಿ, ಡಿವಿಷನ್ ಕಾರ್ಯದರ್ಶಿ ಮುಹಮ್ಮದ್ ಸಫ್ವಾನ್, ಸದಸ್ಯರಾದ ಶಾಹೀನ್ ಅಲೀ ಎಸ್.ಬಿ, ಮೀರಾನ್ ಉಪಸ್ಥಿತರಿದ್ದರು