ದೋಹಾ: ಖತರ್‌ನಲ್ಲಿ ರಾಯಭಾರಿಯಿಂದ ಕರೆಮಾಡುವುದಾಗಿ ಭಾರತೀಯ ವಲಸಿಗರಿಗೆ ಬರುತ್ತಿರುವ ಕರೆಗಳ ವಿರುದ್ಧ ಖತರ್ ಭಾರತೀಯ ರಾಯಭಾರ ಕಚೇರಿ ಎಚ್ಚರಿಕೆ ನೀಡಿದೆ. ಇಂತಹ ಕರೆಗಳಿಗೆ ಸ್ಪಂದಿಸಿ ಪಾಸ್ಪೋರ್ಟ್ ಸಂಖ್ಯೆ ಸೇರಿದಂತೆ ಯಾವುದೇ ಮಾಹಿತಿಯನ್ನು ರವಾನಿಸದಂತೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಾಸ್ಪೋರ್ಟ್ ರದ್ದುಗೊಳಿಸಲು ರಾಯಭಾರ ಕಚೇರಿ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತಿದೆ ಎಂಬ ವರದಿಗಳ ವಿರುದ್ಧ ಖತರ್ ನ ಭಾರತೀಯ ರಾಯಭಾರ ಕಚೇರಿ ವಿವರಣೆ ನೀಡಲು ಮುಂದಾಗಿದ್ದು, ಅನೇಕರು ರಾಯಭಾರ ಕಚೇರಿಯಿಂದ ಎನ್ನುವ ನೆಪದಲ್ಲಿ ಇಂತಹ ಕರೆಗಳನ್ನು ಸ್ವೀಕರಿಸುತ್ತಾರೆ. ಇದು ಸುಳ್ಳಾಗಿದ್ದು, ರಾಯಭಾರ ಕಚೇರಿಯಿಂದ ಇಂತಹ ಯಾವುದೇ ಕರೆ ಮಾಡಲಾಗುತ್ತಿಲ್ಲ. ವಲಸಿಗರು ನಕಲಿ ಫೋನ್ ಕರೆಗಳ ವಿರುದ್ಧ ಎಚ್ಚರದಿಂದಿರಬೇಕು ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಪಾಸ್‌ಪೋರ್ಟ್ ಸಂಖ್ಯೆ, ಖತರ್ ಗುರುತಿನ ಸಂಖ್ಯೆ, ಪ್ಯಾನ್ ಕಾರ್ಡ್ ಇತ್ಯಾದಿಗಳ ಮಾಹಿತಿಯನ್ನು ಕರೆಮಾಡಿದವರಿಗೆ ನೀಡಬಾರದು ಎಂದು ಖತರ್‌ನ ಭಾರತೀಯ ರಾಯಭಾರ ಕಚೇರಿ ಹೇಳಿದೆ ಕರೆ ಮಾಡಿದವರ ಸಂಖ್ಯೆಯನ್ನು ಪರಿಶೀಲಿಸಿ, ಅದನ್ನು ಭಾರತೀಯ ರಾಯಭಾರಿ ಕಚೇರಿಗೆ ರವಾನಿಸುವಂತೆಯೂ ಕಚೇರಿ ತಿಳಿಸಿದೆ.
ನಕಲಿ ಕರೆಗಳನ್ನು ಸ್ವೀಕರಿಸುವವರು cons.doha@mea.gov.inಎಂಬ ಇಮೇಲ್ ವಿಳಾಸದಲ್ಲಿ ದೂರು ನೀಡಬಹುದು ಎಂದು ರಾಯಭಾರ ಕಚೇರಿ ತಿಳಿಸಿದೆ.
ಖತರ್ ಗೃಹ ಸಚಿವಾಲಯ ಈಗಾಗಲೇ ಹಣಕಾಸು ವಂಚಕರ ವಿರುದ್ಧ ದೂರವಾಣಿ ಮೂಲಕ ಎಚ್ಚರಿಕೆ ಟಿಪ್ಪಣಿ ನೀಡಿದೆ.