ಕುವೈತ್ ನಗರ: ಇಪ್ಪತ್ತೈದು ಸಾವಿರ ವಲಸಿಗರನ್ನು ಸರಕಾರಿ ವಲಯದಿಂದ ಹೊರಹಾಕಲಾಗಿದ್ದು, ಕುವೈತ್ ಸಂಸತ್ತಿನ ಮಾನವ ಸಂಪನ್ಮೂಲ ಅಭಿವೃದ್ಧಿ ಸಮಿತಿಯ ಸದಸ್ಯರೊಬ್ಬರು ಈ ಬಗ್ಗೆ ಬಗ್ಗೆ ಮಾಹಿತಿ ನೀಡಿದ್ದಾರೆ. ಕುವೈತ್ನಲ್ಲಿ ಸಾರ್ವಜನಿಕ ವಲಯದಲ್ಲಿ ಸ್ವದೇಶೀಕರವನ್ನು ತ್ವರಿತಗೊಳಿಸುವುದರ ಭಾಗವಾಗಿ ಸುಮಾರು 25 ಸಾವಿರ ವಲಸಿಗರನ್ನು ವಜಾ ಮಡಾಲಾಗುತ್ತಿದೆ.
ಸರಕಾರಿ ವಲಯದಲ್ಲಿ ಉದ್ಯೋಗಕ್ಕಾಗಿ ಕಾಯುತ್ತಿರುವ ಸ್ಥಳೀಯ ಯುವಕರ ಸಂಖ್ಯೆ 6,000 ಕ್ಕೆ ಇಳಿದಿದೆ, ಆದರೆ ಹೊಸತಾಗಿ ವಿದ್ಯಾಭ್ಯಾಸ ಗೈಯ್ಯುವವರ ಸಂಖ್ಯೆ ಹೆಚ್ಚುತ್ತಿರುವ ಕಾರಣ ವಲಸಿಗರನ್ನು ವಜಾ ಗೊಳಿಸಲಾಗಿದೆ ಎಂದು ಸಂಸತ್ತಿನ ಮಾನವ ಸಂಪನ್ಮೂಲ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ, ಸಂಸದ ಖಲೀಲ್ ಅಲ್ ಸಾಲಿಹ್ ಹೇಳಿದರು.
ಆರೋಗ್ಯ ಕ್ಷೇತ್ರದಲ್ಲಿ ಇರುವವರು ಸೇರಿದಂತೆ ವಿದೇಶಿಯರ ಸಂಖ್ಯೆಯನ್ನು ಕಡಿಮೆಗೊಳಿಸಲಾಗುತ್ತಿದೆ. ಸ್ಬದೇಶೀಕರಣದ ಭಾಗವಾಗಿ ದೇಶದ ಸಾರ್ವಜನಿಕ ವಲಯದಲ್ಲಿ 2017ರಲ್ಲಿ 3140 ವಲಸಿಗರನ್ನು ಮತ್ತು 2018ರಲ್ಲಿ 1,500 ವಲಸಿಗರನ್ನು ವಜಾ ಮಾಡಲಾಗಿದೆ ಎಂದು ಸಂಸದ ಖಲೀಲ್ ಅಲ್-ಸಾಲಿಹ್ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ 1,800 ಕ್ಕೂ ಹೆಚ್ಚು ಸ್ವದೇಶೀಯರನ್ನು ದೇಶದ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸೇರಿಸಿಕೊಳ್ಳಲಾಗುವುದು ಎಂದರು.






