janadhvani

Kannada Online News Paper

23 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಇಂದು ಭಾರೀ ಬೆಳವಣಿಗೆಗಳು ನಡೆದಿವೆ. ನೂತನ ರಾಜ್ಯ ಪೊಲೀಸ್ ಮಹಾನಿರ್ದೇಶಕರ ನೇಮಕಾತಿ ಬಳಿಕ 23 ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.

ವರ್ಗಾವಣೆಯಾದ ಐಪಿಎಸ್ ಅಧಿಕಾರಿಗಳು

  • ಪಿ ಎಸ್ ಸಂಧು, ಎಡಿಜಿಪಿ ಐಎಸ್ಡಿ, ಬೆಂಗಳೂರು.
  • ಟಿ ಸುನೀಲ್ ಕುಮಾರ್, ಎಡಿಜಿಪಿ ಎಸಿಬಿ.
  • ಸಿ ಎಚ್ ಪ್ರತಾಪ್ ರೆಡ್ಡಿ, ಎಡಿಜಿಪಿ ಕಮ್ಯುನಿಕೇಶನ್ಸ್ ಅಂಡ್ ಲಾಜಿಸ್ಟಿಕ್.
  • ಸೀಮಂತ್ ಕುಮಾರ್ ಸಿಂಗ್ – ಐಜಿಪಿ ಪಶ್ಚಿಮ ವಲಯ ಮಂಗಳೂರು
  • ಪಿ. ಹರಿಶೇಖರನ್, ಐಜಿಪಿ ತರಬೇತಿ ವಿಭಾಗ ಬೆಂಗಳೂರು.
  • ಸೌಮೆಂದು ಮುಖರ್ಜಿ, ಹೆಚ್ಚುವರಿ ಪೊಲೀಸ್ ಆಯುಕ್ತ ಪಶ್ಚಿಮ ವಿಭಾಗ ಬೆಂಗಳೂರು.
  • ರವಿ ಎಸ್ , ಐಜಿಪಿ, ಐಎಸ್ ಡಿ ಬೆಂಗಳೂರು
  • ಪವಾರ್ ಪ್ರವೀಣ್ ಮಧುಕರ್, ಡಿಐಜಿ, ಆಡಳಿತ, ಬೆಂಗಳೂರು
  • ಕೆಟಿ ಬಾಲಕೃಷ್ಣ – ಡಿಐಜಿ, ನೇಮಕಾತಿ ಮತ್ತು ತರಬೇತಿ ಬೆಂಗಳೂರು
  • ಡಾ, ಚಂದ್ರಗುಪ್ತ, ಡಿಐಜಿ, ಮೈಸೂರು ಕಮೀಷನರ್.
  • ಅನೂಪ್ ಅಗರ್ವಾಲ್- ಎಸ್ಪಿ, ವಿಜಯಪುರ
  • ರಾಮ್ ನಿವಾಸ್ ಸೆಪೆಟ್ – ಎಸ್ಪಿ, ಎಸಿಬಿ, ಬೆಂಗಳೂರು ನಗರ
  • ಪಾಟೀಲ್ ವಿನಾಯಕ ವಸಂತರಾವ್- ಎಸ್ಪಿ, ವಿಧಿವಿಜ್ಞಾನ ಪ್ರಯೋಗಾಲಯ, ಬೆಂಗಳೂರು
  • ನಿಕ್ಕಂ ಪ್ರಕಾಶ್ ಅಮ್ರಿತ್, ಎಸ್ಪಿ, ಗುಪ್ತಚರ ಇಲಾಖೆ, ಬೆಂಗಳೂರು
  • ಜಿ.ರಾಧಿಕಾ, ಎಸ್ಪಿ, ಚಿತ್ರದುರ್ಗ
  • ಅರುಣ್ ಕೆ., ಎಸ್ಪಿ, ಬಿಎಂಟಿಪಿ (ಭದ್ರತೆ ಮತ್ತು ವಿಚಕ್ಷಣ ದಳ), ಬೆಂಗಳೂರು
  • ನಾಗೇಶ್ ಡಿ.ಎಲ್.- ಎಸ್ಪಿ, ಬೀದರ್
  • ಆರ್. ಶ್ರೀನಿವಾಸಗೌಡ, ಎಸ್ಪಿ, ಹಾಸನ
  • ಯತೀಶ್ ಎನ್. – ಎಸ್ಪಿ, ಗದಗ
  • ಡಿ.ಶ್ರೀಧರ್- ಎಸ್ಪಿ- ಇಂಟಲಿಜೆನ್ಸಿಮ ಬೆಂಗಳೂರು
  • ಜೀನೇಂದ್ರ ಕಣಗವಿ, ಎಸ್ಪಿ, ಪೊಲೀಸ್ ತರಬೇತಿ ಕೇಂದ್ರ, ಚನ್ನಪಟ್ಟಣ
  • ಕೆ.ವಿ.ಜಗದೀಶ್, ಅಡಿಷನಲ್ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್, ಡಿಜಿಪಿ ಕಚೇರಿ ಬೆಂಗಳೂರು
  • ನಾರಾಯಣ್ – ಡಿಸಿಪಿ ಪೂರ್ವ ವಿಭಾಗ, ಟ್ರಾಫಿಕ್ ಬೆಂಗಳೂರು.

ಮೂವರು ಐಪಿಎಸ್ ಅಧಿಕಾರಿಗಳಿಗೆ ಎಡಿಜಿಪಿ ಹುದ್ದೆಯಿಂದ ಡಿಜಿಪಿ ಹುದ್ದೆಗೆ ಬಡ್ತಿ ನೀಡಿ ವರ್ಗಾವಣೆ ಮಾಡಿದೆ. ಎನ್ ಎಸ್ ಮೇಘರಿಕ್, ಡಿಜಿಪಿ ಸಿಐಡಿ, ಆರ್ ಪಿ ಶರ್ಮಾ, ಡಿಜಿಪಿ ಕರ್ನಾಟಕ ಪೊಲೀಸ್ ಹೌಸಿಂಗ್ ಕಾರ್ಪೊರೇಷನ್ ಮತ್ತು ಅಲೋಕ್ ಮೋಹನ್ ಕಾರಾಗೃಹ ಇಲಾಖೆ ಡಿಜಿಪಿಯಾಗಿ ಬಡ್ತಿ ಪಡೆದಿದ್ದಾರೆ. ಅದೇ ರೀತಿ ಮೂವರು ಐಪಿಎಸ್ ಅಧಿಕಾರಿಗಳಿಗೆ ಐಜಿಪಿ ಹುದ್ದೆಯಿಂದ ಎಡಿಪಿಜಿ ಹುದ್ದೆಗೆ ಬಡ್ತಿ ನೀಡಿ, ವರ್ಗಾವಣೆ ಮಾಡಲಾಗಿದೆ. ಅಮೃತ್ ಪೌಲ್, ಎಡಿಜಿಪಿ, ನೇಮಕಾತಿ ಮತ್ತು ತರಬೇತಿ, ಉಮೇಶ್ ಕುಮಾರ್, ಎಡಿಜಿಪಿ, ಗೃಹ ಇಲಾಖೆ ಕಾರ್ಯದರ್ಶಿ ಹಾಗೂ ಅರುಣ್ ಚಕ್ರವರ್ತಿ, ಬೆಂಗಳೂರು ರೈಲ್ವೆ ಎಡಿಜಿಪಿಯಾಗಿ ಬಡ್ತಿ ಪಡೆದಿದ್ದಾರೆ

error: Content is protected !! Not allowed copy content from janadhvani.com