janadhvani

Kannada Online News Paper

2020 ಗಲ್ಫ್ ಇಶಾರ ಚಂದಾ ಅಭಿಯಾನ: ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಾಮಾರಿಂದ ಉದ್ಘಾಟನೆ

ಯುಎಇ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಯು.ಎ.ಇ ಕಳೆದ ನಾಲ್ಕು ವರ್ಷಗಳಿಂದ ಯು.ಎ.ಇ ಮಾಸಿಕವಾಗಿ ಹೊರತರುತ್ತಿರುವ ಗಲ್ಫ್ ಇಶಾರ ಇದರ ಐದನೇ ವರ್ಷದ ಚಂದಾ ಅಭಿಯಾನವನ್ನು ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂರವರು ಜನವರಿ 31 ರಂದು ಶಾರ್ಜಾ ಪೇಸ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಪ್ರತಿಭೋತ್ಸವ-2020 ನಲ್ಲಿ ಅಧಿಕೃತವಾಗಿ ಉದ್ಘಾಟನೆ ಮಾಡಲಿದ್ದಾರೆ ಎಂದು ಕೆಸಿಎಫ್ ರಾಷ್ಟ್ರೀಯ ಪಬ್ಲಿಕೇಷನ್ ವಿಭಾಗದ ಅಧ್ಯಕ್ಷ ಅಬ್ದುಲ್ ಕರೀಂ ಮುಸ್ಲಿಯಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅರಬ್ ರಾಷ್ಟ್ರದ ಅನುಮೋದನೆಯೊಂದಿಗೆ ಕರ್ನಾಟಕದ ಇತಿಹಾಸದಲ್ಲೇ ಮೊತ್ತ ಮೊದಲಬಾರಿಗೆ ವಿದೇಶ ರಾಷ್ಟ್ರಗಳಲ್ಲಿ ಬಿಡುಗಡೆಗೊಂಡ ಮೊದಲ ಪತ್ರಿಕೆಯಾಗಿರುತ್ತದೆ ಗಲ್ಫ್ ಇಶಾರ ಎಂದು ಅವರು ತಿಳಿಸಿದರು. ಯುಎಇ ಯಾದ್ಯಂತ 3500 ರಷ್ಟು ಪ್ರತಿಗಳು ಪ್ರತಿ ತಿಂಗಳು ಕನ್ನಡಿಗ ಚಂದಾದಾರರ ಮನೆ ಬಾಗಿಲಿಗೆ ತಲುಪುತ್ತಿದೆ. ಕರ್ನಾಟಕ ಮಣ್ಣಿನ ನೆಲ, ಜಲ, ಭಾಷೆ, ಸಂಸ್ಕೃತಿಯನ್ನು ಗೌರವಿಸುವ ಸಲುವಾಗಿ ಕೆ.ಸಿ.ಎಫ್ ಈ ಸೇವೆಯನ್ನುಕಳೆದ ನಾಲ್ಕು ವರ್ಷಗಳಿಂದ ನಡೆಸುತ್ತಾ ಬರುತ್ತಿದೆ. ಕನ್ನಡಿಗರ ಮಾತೃ ಭಾಷೆ ಮತ್ತು ಸಂಸ್ಕೃತಿಯನ್ನು ಯುಎಇಯಲ್ಲಿ ಪ್ರಚಾರಪಡಿಸುತ್ತಿರುವ ಕೆ.ಸಿ.ಎಫ್ ಕರ್ನಾಟಕದ ಅಭಿವೃದ್ದಿಗಾಗಿ ಹಲವಾರು ಸಾಮಾಜಿಕ, ಶೆಕ್ಷಣಿಕ, ಸಾಮುದಾಯಿಕ ಸೇವೆಗಳನ್ನು ಮುಂದಿಟ್ಟು ಕೊಂಡು ಕಾರ್ಯಾಚರಿಸುತ್ತಿದೆ.

ಅರಬ್ ಮತ್ತು ಮಲೇಷ್ಯಾ ಲಂಡನ್ ರಾಷ್ಟ್ರಗಳಲ್ಲಿ ಕಾರ್ಯಾಚರಿಸುತ್ತಿರುವ ಕೆ.ಸಿ.ಎಫ್ 15000 ಮಿಕ್ಕ ಸದಸ್ಯರನ್ನೊಳಗೊಂಡ ಕರ್ನಾಟಕದ ಅತೀ ದೊಡ್ಡ ಪ್ರವಾಸಿ ಸಂಘಟನೆಯಾಗಿ ಕಾರ್ಯಾಚರಿಸುತ್ತಿದೆ. ಪತ್ರಿಕಾಗೋಷ್ಠಿಯಲ್ಲಿ ಪ್ರತಿಭೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಇಬ್ರಾಹಿಂ ಹಾಜಿ ಬ್ರೈಟ್ ಮಾರ್ಬಲ್ ಅಬುಧಾಬಿ, ಕೆಸಿಎಫ್ ರಾಷ್ಟ್ರೀಯ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ, ಕೆಸಿಎಫ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೂಸ ಹಾಜಿ ಬಸರ, ಝೈನುದ್ದೀನ್ ಹಾಜಿ ಬೆಳ್ಳಾರೆ,ಉದ್ಯಮಿ ಅಬ್ದುಲ್ ಸಮದ್ ಶಾರ್ಜಾ, ರಫೀಕ್ ಕಲ್ಲಡ್ಕ, ಹನೀಫ್ ಬಸರ, ಕರೀಂ ಮುಸ್ಲಿಯಾರ್ ಶಾರ್ಜಾ, ನಿಝಾಮುದ್ದೀನ್ ಮದನಿ ಅಜ್ಮಾನ್, ಅಬ್ದುಲ್ ಖಾದರ್ ಸಾಲೆತ್ತೂರು, ನವಾಜ್ ಕೋಟೆಕಾರ್ ಉಪಸ್ಥಿತರಿದ್ದರು. ಯುಎಇ ಯಲ್ಲಿರುವ ಎಲ್ಲಾ ಅನಿವಾಸಿ ಕನ್ನಡಿಗರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿಕೊಡಬೇಕಾಗಿ ಪತ್ರಿಕಾಗೋಷ್ಠಿಯಲ್ಲಿ ವಿನಂತಿಸಿದೆ.

error: Content is protected !! Not allowed copy content from janadhvani.com