ನವದೆಹಲಿ: ದೇಶದಲ್ಲಿ ಬೆಲೆ ಏರಿಕೆ ಮತ್ತು ನಿರುದ್ಯೋಗ ಪ್ರಮಾಣವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರ ಗಮನವನ್ನು ಇತರೆಡೆಗೆ ಸೆಳೆಯುವ ಸಲುವಾಗಿ ಕೇಂದ್ರ ಸರಕಾರವು ಪೌರತ್ವ ಕಾನೂನು ಮತ್ತು ಎನ್‌ಆರ್‌ಸಿಯನ್ನು ಜಾರಿಗೆ ತರುವ ಪ್ರಯತ್ನ ನಡೆಸುತ್ತಿದೆ ಎಂದು ಇಂಡಿಯಾ ಟುಡೇ ನಡೆಸಿದ ಸರ್ವೇ ತಿಳಿಸಿದೆ.
ದೇಶದಲ್ಲಿ ಭಾರೀ ಆರ್ಥಿಕ ಪರಿಸ್ಥಿತಿಯು ಎದುರಾಗಿದ್ದು, ಅದರಿಂದ ಜನರ ಗಮನವನ್ನು ಸೆಳೆಯಲು ಈ ರೀತಿ ಪ್ರಯತ್ನ ಪಡಲಾಗುತ್ತಿದೆ ಎಂದು ಇಂಡಿಯಾ ಟುಡೇ ನಡೆಸಿದ ‘ಮೂಡ್ ಆಫ್ ದಿ ನೇಷನ್’ ಸರ್ವೇಯಲ್ಲಿ ಭಾಗವಹಿಸಿದ 43 ಶೇಕಡಾ ಜನರು ಹೇಳಿದ್ದಾರೆ. 32 ಶೇಕಡಾ ಜನರು ನಾವು ಆ ರೀತಿ ನಂಬುವುದಿಲ್ಲ ಎಂದರೆ, 25 ಶೇಕಡಾ ಜನರು ಆ ಬಗ್ಗೆ ತಿಳಿಯದು ಎಂದಿದ್ದಾರೆ. ಡಿಸೆಂಬರ್ 21ರಿಂದ 31ವರೆಗೆ ಇಂಡಿಯಾ ಟುಡೇ ಈ ಸರ್ವೇಯನ್ನು ನಡೆಸಿದ್ದವು.