ಉಮ್ಮುಲ್ ಕುವೈನ್: ತನ್ನ ಇಂಟರ್ನೆಟ್ ಸಂಪರ್ಕವನ್ನು ಇತರರೊಂದಿಗೆ ಹಂಚಿಕೊಂಡ ಕಾರಣಕ್ಕಾಗಿ ಏಶ್ಯಾ ಮೂಲದ ವಲಸಿಗನಿಗೆ ನ್ಯಾಯಾಲಯವು ಭಾರೀ ಮೊತ್ತದ ದಂಡ ವಿಧಿಸಿದೆ. ಯುಎಇಯ ಉಮ್ಮುಲ್ ಕುವೈನ್‌ನಲ್ಲಿ ವಾಸಿಸುತ್ತಿರುವ ಏಷ್ಯಾದ ವ್ಯಕ್ತಿಯೊಬ್ಬರು ಅದೇ ಕಟ್ಟಡದಲ್ಲಿ ವಾಸಿಸುತ್ತಿದ್ದ ಕೆಲವು ಜನರೊಂದಿಗೆ ತನ್ನ ಇಂಟರ್ನೆಟ್ ಸಂಪರ್ಕವನ್ನು ಹಂಚಿಕೊಂಡಿದ್ದು, ಅವರಿಗೆ 50,000 ದಿರ್ಹಂ (9.68 ಲಕ್ಷ ರೂ.ಗಿಂತಲೂ ಹೆಚ್ಚು) ದಂಡ ವಿಧಿಸಿದೆ.
ನೆರೆಹೊರೆಯವರೊಂದಿಗೆ ತನ್ನ ಇಂಟರ್ನೆಟ್‌ಗೆ ಬೂಸ್ಟರ್ ಬಳಸಿ ಸಂಪರ್ಕ ಹಂಚಿಕೊಂಡಿದ್ದು, ಇಂಟರ್ನೆಟ್ ಬಳಸಿದ್ದಕ್ಕಾಗಿ ಎಲ್ಲರಿಂದ ಹಣವನ್ನೂ ಪಡೆದಿದ್ದರು. ಇದು ಫೆಡರಲ್ ಕಾನೂನು 3/2003 ಮತ್ತು ತಿದ್ದುಪಡಿ ಮಾಡಿದ ಫೆಡರಲ್ ಕಾನೂನು 5/2008 ರ ಅಡಿಯಲ್ಲಿ ಕಾನೂನುಬಾಹಿರವಾಗಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಈ ವಲಸಿಗನನ್ನು ಬಂಧಿಸಲಾಗಿತ್ತು. ವಂಚನೆ ಪತ್ತೆಹಚ್ಚಲು ಟೆಲಿಕಾಂ ಕಂಪನಿ ನೇಮಿಸಿದ ಅಧಿಕಾರಿಯೊಬ್ಬರು ದೂರು ದಾಖಲಿಸಿದ್ದರು. ಆ ಪ್ರಕಾರ ಬಂದನಕ್ಕೊಳಗಾದ ವ್ಯಕ್ತಿಯನ್ನು ನಂತರ ವಿಚಾರಣೆಗೆ ರಿಮಾಂಡ್ ಮಾಡಲಾಗಿ, ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅವರು ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದರು. ನ್ಯಾಯಾಲಯವು ಆರೋಪಿಯನ್ನು ತಪ್ಪಿತಸ್ಥನೆಂದು ಪರಿಗಣಿಸಿ, ಭಾರಿ ದಂಡದ ಜೊತೆಗೆ ನ್ಯಾಯಾಲಯದ ವೆಚ್ಚವನ್ನು ಪಾವತಿಸಲು ಆದೇಶ ನೀಡಿದೆ.