janadhvani

Kannada Online News Paper

ಜ.15: ಅಡ್ಯಾರಿನಲ್ಲಿ ಬೃಹತ್ ಪ್ರತಿಭಟನೆ- ಸುನ್ನೀ ಕೋರ್ಡಿನೇಷನ್ ಸಮಿತಿ ಯಶಸ್ವಿಗೆ ಕರೆ

ಮಂಗಳೂರು: ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಕುರಿತಾದ ಅವಹೇಲನಕಾರಿ ಸಂದೇಶ ಸಂಬಂಧಿತ ಅಮಾಯಕ ಉಸ್ತಾದರೊಬ್ಬರ ವಿರುದ್ಧ ದಾಖಲಿಸಲಾದ ದೇಶದ್ರೋಹ ಕೇಸ್ ಪ್ರಕರಣವನ್ನು ಹಿಂಪಡೆಯುವುದಾಗಿ ಲಿಖಿತ ಬರವಸೆ ಲಭಿಸಿರುವ ಹಿನ್ನಲೆಯಲ್ಲಿ ಬಹಿಷ್ಕರಿಸಲು ಚಿಂತನೆ ನಡೆಸಲಾಗಿದ್ದ ಅಡ್ಯಾರ್ ಪ್ರತಿಭಟನೆಗೆ ಸುನ್ನೀ ಕೋರ್ಡಿನೇಷನ್ ಪೂರ್ಣ ಬೆಂಬಲವನ್ನು ಘೋಷಿಸಿದೆ.

ಈ ಕುರಿತು ಸುನ್ನೀ ಕೋರ್ಡಿನೇಷನ್ ಮುಖಂಡರು ಮತ್ತು ಮುಸ್ಲಿಂ ಸೆಂಟ್ರಲ್ ಕಮಿಟಿ ನಾಯಕರೊಂದಿಗೆ ಇಂದು ಚರ್ಚೆ ನಡೆದಿದ್ದು, ಪ್ರಕರಣವನ್ನು ಇತ್ಯರ್ಥಗೊಳಿಸಿರುವುದಾಗಿ ಬರವಸೆ ಲಭಿಸಿದ ಹಿನ್ನಲೆಯಲ್ಲಿ ಈ ಕುರಿತು ಯಾವುದೇ ಊಹಾಪೋಹಗಳನ್ನು ಹರಡಿ, ಗೊಂದಲಕ್ಕೀಡು ಮಾಡದಂತೆ ನಾಯಕರು ವಿನಂತಿಸಿದ್ದಾರೆ.

ಜನವರಿ 15 ರಂದು ಅಡ್ಯಾರಿನಲ್ಲಿ ನಡೆಯುವ ಬೃಹತ್ ಪ್ರತಿಭಟನಾ ಸಮಾವೇಶವನ್ನು ಕರ್ನಾಟಕ ಸುನ್ನೀ ಕೋರ್ಡಿನೇಷನ್ ಸಮಿತಿ ((SJU SJM KMJ SYS SEDC SSF SMA KCF) ಸಂಪೂರ್ಣ ಯಶಸ್ವಿಗೊಳಿಸಬೇಕೆಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ. ಪಿ. ಅಹ್ಮದ್ ಸಖಾಫಿ ಕಾಶಿಪಟ್ನ ಹಾಗೂ ತೋಕೆ ಮುಹ್ಯುದ್ದೀನ್ ಕಾಮಿಲ್ ಸಖಾಫಿ,ಹಾಫಿಳ್ ಯಾಕೂಬ್ ಸಅದಿ ಮುಂತಾದವರು ವೀಡಿಯೋ ಸಂದೇಶ ಮೂಲಕ ವಿನಂತಿಸಿದ್ದಾರೆ.

ಇತ್ತೀಚೆಗೆ ಮಂಗಳೂರು ಖಾಝಿಯವರ ಕುರಿತಾಗಿ ಸಾಮಾಜಿಕ ಜಾಲ ತಾಣವಾದ ವಾಟ್ಸಾಪ್ ನಲ್ಲಿ ಅವಹೇಳನಕಾರಿ ಸಂದೇಶ ಹರಿದಾಡಿದ ಸಂಬಂಧ ಅಮಾಯಕರಾದ ಮದ್ರಸಾ ಅಧ್ಯಾಪಕ ಹಸನ್ ಝುಹ್ರಿ ಮಂಗಳಪೇಟೆ ಉಸ್ತಾದರ ವಿರುದ್ಧ ಮಂಗಳೂರು ಬಂದರು ಪೋಲೀಸ್ ಠಾಣೆಯಲ್ಲಿ ದೇಶದ್ರೋಹ ಪ್ರಕರಣ ದಾಖಲಿಸಲಾಗಿತ್ತು, ಮಂಗಳೂರು ಖಾಝಿಯವರ ಪರವಾಗಿ (ತಮೀಮ್ ಬಂದರ್) ಕೇಸು ದಾಖಲಿಸಿದ್ದರು.

ಇದು ಸಾಮಾಜಿಕ ಜಾಲ ತಾಣಗಳಲ್ಲಿ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಎಲ್ಲರೂ ಒಗ್ಗಟ್ಟಾಗಿ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್ ಆರ್ಸಿ ವಿರುದ್ಧ ಹೋರಾಡುತ್ತಿರುವ ಈ ಸನ್ನಿವೇಶದಲ್ಲಿ ಖಾಝಿಯವರ ಈ ನಡೆಯು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಸುನ್ನೀ ಕೋರ್ಡಿನೇಶನ್ ಕಮಿಟಿಯು ಈ ಸಂಬಂಧ ಮುಸ್ಲಿಂ ಸೆಂಟ್ರಲ್ ಕಮಿಟಿಯ ಕಾರ್ಯದರ್ಶಿಯವರ ನಡೆಯಿಂದ ಅಸಾಮಾಧಾನಗೊಂಡು ಜ.15 ರಂದು ಅಡ್ಯಾರಿನಲ್ಲಿ ನಡೆಯುವ ಪ್ರತಿಭಟನೆಯನ್ನು ಬಹಿಷ್ಕರಿಸಲು ಚಿಂತನೆ ನಡೆಸಿತ್ತು.

error: Content is protected !! Not allowed copy content from janadhvani.com