ರಿಯಾದ್: ಸಂಗೀತ ಕಾರ್ಯಕ್ರಮವೊಂದರಲ್ಲಿ ಸಭ್ಯವಲ್ಲದ ರೀತಿಯಲ್ಲಿ ಉಡುಗೆ ತೊಟ್ಟು ವರ್ತಿಸಿದವರನ್ನು ಸೌದಿ ಅರೇಬಿಯಾದಲ್ಲಿ ಬಂಧಿಸಲಾಗಿದೆ. ರಿಯಾದ್ ಋತುವಿನ ಅಂಗವಾಗಿ ನಡೆದ ಬೃಹತ್ ಸಂಗೀತ ರಸಮಂಜರಿಯಲ್ಲಿ ಹೆಚ್ಚಿನ ಸಂಖ್ಯೆಯ ಪುರುಷರು ಮತ್ತು ಮಹಿಳೆಯರು ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಸಾರ್ವಜನಿಕ ಮಾನದಂಡಗಳ ಉಲ್ಲಂಘನೆ,ಅಸಭ್ಯ ವಸ್ತ್ರಧಾರಣೆಗಾಗಿ 52 ಜನರನ್ನು ಬಂಧಿಸಲಾಗಿದೆ.
ಅವರು ಅಸಭ್ಯವಾಗಿ ಮತ್ತು ಅವಾಚ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ಕಾರ್ಯಕ್ರಮವನ್ನು ನೋಡಲು ಬಂದ ಸ್ಥಳೀಯ ನಾಗರಿಕರು ನೀಡಿದ ದೂರುಗಳ ಆಧಾರದ ಮೇಲೆ ಈ ಬಂಧನ ನಡೆದಿದೆ. 52ರಲ್ಲಿ 29 ಮಂದಿ ಮಹಿಳೆಯರಾಗಿದ್ದಾರೆ. ಅನುಚಿತವಾಗಿ ಮಾತನಾಡಿದ್ದ ಮತ್ತು ಉಡುಗೆ ತೊಟ್ಟಿದ್ದಕ್ಕಾಗಿ ಮಹಿಳೆಯರನ್ನು ಬಂಧಿಸಲಾಯಿತು. ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ ಕಾರಣಕ್ಕಾಗಿ ಪುರುಷರನ್ನು ಬಂಧಿಸಲಾಗಿದೆ.






