janadhvani

Kannada Online News Paper

CAA: ಮುಸ್ಲಿಂ ರಾಷ್ಪ್ರಗಳ ವಿರೋಧ- ಭಾರತೀಯ ವಿದೇಶಾಂಗ ಸಚಿವ ಒಮಾನ್ ಭೇಟಿ

ನವದೆಹಲಿ: ಕೊಲ್ಲಿ ಸೇರಿದಂತೆ ಅರಬ್ ರಾಷ್ಟ್ರಗಳ ಕಳವಳವನ್ನು ಬಗೆಹರಿಸಲು ಭಾರತೀಯ ವಿದೇಶಾಂಗ ಸಚಿವಾಲಯ ಮುಂದಾಗಿದೆ. ಭಾರತೀಯ ಅಲ್ಪಸಂಖ್ಯಾತರು ಎದುರಿಸುತ್ತಿರುವ ಅಬಧ್ರತೆಯ ಬಗ್ಗೆ ಗಲ್ಫ್ ಕಾಷ್ರಗಳು ಕಳವಳ ವ್ಯಕ್ತಪಡಿಸಿದ ಹಿನ್ನೆಲೆಯಲ್ಲ ಈ ನಡೆ ಎನ್ನಲಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆಯು ಮುಸ್ಲಿಮರ ವಿರುದ್ಧವಲ್ಲ ಎಂಬುದನ್ನು ಸ್ಥಾಪಿಸಲು ರಾಜತಾಂತ್ರಿಕ ಕೇಂದ್ರಗಳು ಪ್ರಯತ್ನಿಸುತ್ತಿವೆ. ಕಾಶ್ಮೀರದ ಸವಲತ್ತು ಹಿಂತೆಗೆದುಕೊಳ್ಳುವಿಕೆ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ಅರಬ್ ಮುಸ್ಲಿಂ ರಾಷ್ಟ್ರಗಳಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿದೆ.

ಭಾರತದೊಂದಿಗೆ ನಿಕಟ ಸಂಬಂಧ ಹೊಂದಿರುವ ಕೊಲ್ಲಿ ರಾಷ್ಟ್ರಗಳ ಸಹಭಾಗಿತ್ವದ ಒಐಸಿಯ ಹೇಳಿಕೆ ಕೇಂದ್ರಕ್ಕೆ ದೊಡ್ಡ ಹೊಡೆತವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ವಿದೇಶಾಂಗ ಖಾತೆ ಸಚಿವ ಎಸ್.ಜೈಶಂಕರ್ ಅವರ ಇರಾನ್ ಮತ್ತು ಒಮಾನ್ ಪ್ರವಾಸ ಮಂಗಳವಾರ ಆರಂಭವಾಗಿದೆ. ಈ ಎರಡೂ ದೇಶಗಳಲ್ಲಿ ಕೇಂದ್ರ ವಿದೇಶಾಂಗ ಸಚಿವರು ಪೌರತ್ವ ಕಾಯ್ದೆಯ ತಿದ್ದುಪಡಿ ಬಗ್ಗೆ ಅಧಿಕಾರಿಗಳ ಮುಂದೆ ವಿವರಿಸುವ ನಿರೀಕ್ಷೆಯಿದೆ.

ಇರಾನ್‌ ನ ಭಾಗವಹಿಸುವಿಕೆಯೊಂದಿಗೆ ನಡೆದ ಕೌಲಾಲಂಪುರ್ ಸಮಾವೇಶವು ಭಾರತದಲ್ಲಿ ಮುಸ್ಲಿಂ ವಿರೋಧಿ ನಡೆಯನ್ನು ವಿರೋಧಿಸಿದ್ದು, ಇರಾನ್‌ನಿಂದ ಒಮಾನ್‌ಗೆ ಆಗಮಿಸುವ ಜಯಶಂಕರ್ ವಿದೇಶಾಂಗ ಸಚಿವ ಯೂಸುಫ್ ಬಿನ್ ಅಲವಿ ಬಿನ್ ಅಬ್ದುಲ್ಲಾ ಅವರನ್ನೂ ಭೇಟಿ ಮಾಡಲಿದ್ದಾರೆ.

ಸಚಿವರು ಮಸ್ಕತ್‌ನಲ್ಲಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಭಾರತದ ಶಾಸನವನ್ನು ಮುಸ್ಲಿಂ ವಿರೋಧಿ ಎನ್ನುವ ರೀತಿಯಲ್ಲಿ ದಾರಿ ತಪ್ಪಿಸಲು ಮಾಧ್ಯಮಗಳು ಪ್ರಯತ್ನಿಸುತ್ತಿವೆ ಎಂದು ಸರ್ಕಾರ ರಾಜತಾಂತ್ರಿಕ ಕಾರ್ಯಾಚರಣೆಗಳ ಮೂಲಕ ವಿವರಿಸಲು ಪ್ರಾರಂಭಿಸಿದೆ.ಪ್ರಧಾನಿ ಮೋದಿಯವರ ರಾಮಲೀಲಾ ಭಾಷಣದಲ್ಲಿನ ಉಲ್ಲೇಖಗಳನ್ನು ಆಧರಿಸಿ ವಿದೇಶಗಳಲ್ಲಿ ವಿವರಣೆ ನಡೆಯಲಿದೆ.