janadhvani

Kannada Online News Paper

ವಾರಾಂತ್ಯದಲ್ಲಿ ಸೌದಿಗೆ ಭೇಟಿ ನೀಡಲು ಉಚಿತ ವೀಸಾ

ರಿಯಾದ್: ಯುಎಇ, ಕುವೈತ್ ಮತ್ತು ಬಹ್ರೇನ್‌ನಲ್ಲಿ ಕಾನೂನುಬದ್ಧವಾಗಿ ನೆಲೆಸಿರುವ ವಿದೇಶಿಯರಿಗೆ ವಾರಾಂತ್ಯದಲ್ಲಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡಲು ಅವಕಾಶವಿದೆ. ದೇಶದ ವಿವಿಧ ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶದ ಭಾಗವಾಗಿ ಈವೆಂಟ್ ವೀಸಾ ಎನ್ನಲಾಗುವ ಉಚಿತ ವೀಸಾ ನೀಡಲಾಗುತ್ತದ್ದು, ಗಡಿ ಚೆಕ್ ಪೋಸ್ಟ್‌ಗಳಿಂದ ನೇರವಾಗಿ ವೀಸಾಗಳನ್ನು ಒದಗಿಸುವ ಯೋಜನೆ ಇದಾಗಿದೆ.

ರಿಯಾದ್ ಋತುವಿನ ಅಂತಿಮ ಹಂತದಲ್ಲಿ ಈ ಸೌಲಭ್ಯ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾರಾಂತ್ಯದ ರಜಾದಿನಗಳನ್ನು ಆಚರಿಸಲು ಗುರುವಾರ, ಶುಕ್ರವಾರ ಮತ್ತು ಶನಿವಾರದಂದು ಮಾತ್ರ ಉಚಿತ ವೀಸಾ ಲಭ್ಯವಿದೆ. ಈ ಯೋಜನೆಯು ದೇಶದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿಚ್ಚಿಸುವವರ ಪ್ರಕ್ರಿಯೆಯನ್ನು ಸರಳಗೊಳಿಸುವ ಗುರಿಯನ್ನು ಹೊಂದಿದೆ. ಈ ಹಿಂದೆ 49 ದೇಶಗಳ ಪ್ರವಾಸಿಗರನ್ನು ಆಕರ್ಷಿಸಲು ವೀಸಾ ಮತ್ತು ಇ-ಟೂರಿಸ್ಟ್ ವೀಸಾಗಳನ್ನು ನೀಡಲಾಗಿತ್ತು.

ಸೌದಿ ಅರೇಬಿಯಾಕ್ಕೆ ಪ್ರಸ್ತುತ 41 ಮಿಲಿಯನ್ ಪ್ರವಾಸಿಗರು ಆಗಮಿಸುತ್ತಿದ್ದಾರೆ. 2030 ರ ವೇಳೆಗೆ
100 ಮಿಲಿಯನ್ ಪ್ರವಾಸಿಗರನ್ನು ನಿರೀಕ್ಷಿಸುತ್ತಿದ್ದು,
2030 ರ ವೇಳೆಗೆ ಮೊದಲ ಐದು ಪ್ರವಾಸಿ ಆಕರ್ಷಣೀಯ ದೇಶಗಳಲ್ಲೊಂದಾಗಿ ಸೌದಿ ಅರೇಬಿಯಾ ಮಾರ್ಪಟ್ಟು, ಒಟ್ಟು ಆದಾಯವು ಶೇಕಡಾ ಮೂರರಿಂದ 10 ಕ್ಕೆ ಏರುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.