janadhvani

Kannada Online News Paper

ಇಂಜಮೀನಾ: ಮಧ್ಯ ಆಫ್ರಿಕಾ ದೇಶವಾದ ಚಾಡ್‌ನಲ್ಲಿ ಬೊಕೊ ಹರಾಮ್ ಉಗ್ರರು ದಾಳಿ ನಡೆಸಿದ್ದಾರೆ. ಮೀನುಗಾರರೇ ತುಂಬಿರುವ ಚಾಡ್ ಸರೋವರದ ಬಳಿಯಲ್ಲಿ ಈ ದಾಳಿ ನಡೆದಿದ್ದು, 14 ಜನರು ಮೃತಪಟ್ಟಿದ್ದಾರೆ ಎಂದು ಅಧಿಕೃತವಾಗಿ ದೃಢೀಕರಿಸಲಾಗಿದೆ. ಅನೇಕರು ಗಾಯಗೊಂಡಿದ್ದು, ಹದಿಮೂರು ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.

ಕ್ಯಾಮರೂನ್, ಚಾಡ್ ಮತ್ತು ನೈಜೀರಿಯಾದ ಗಡಿಯಾಗಿರುವ ಕೈಗಾ ಗ್ರಾಮದಲ್ಲಿ ಅನಿರೀಕ್ಷಿತ ದಾಳಿ ನಡೆದಿದೆ. ಸಾಂಪ್ರದಾಯಿಕ ಮುಸ್ಲಿಮರ ಮೇಲೆ ಇಲ್ಲಿ ಭಯೋತ್ಪಾದಕ ದಾಳಿಗಳು ವ್ಯಾಪಕವಾಗಿ ನಡೆಯುತ್ತಿವೆ ಎನ್ನಲಾಗಿದೆ.