janadhvani

Kannada Online News Paper

ಮಕ್ಕಾ: ಹರಂ ಮಸೀದಿ ಬಳಿಯ ಲಗೇಜ್ ಲಾಕರ್ ಸ್ಥಳಾಂತರ

ಜಿದ್ದಾ: ಮಕ್ಕಾದ ಹರಂ ಮಸೀದಿಯ ಅಂಗಳದಲ್ಲಿ ಸ್ಥಾಪಿಸಲಾಗಿದ್ದ ಲಾಕರ್‌ಗಳನ್ನು ಸಂಪೂರ್ಣವಾಗಿ ನೆಲಸಮಗೊಳಿಸಲಾಗಿದ್ದು, ಹರಂಗೆ ಹೋಗುವ ಮುಖ್ಯ ರಸ್ತೆಯಲ್ಲಿ ಹೊಸ ಲಾಕರ್‌ಗಳನ್ನು ಅಳವಡಿಸಲಾಗುತ್ತಿದೆ. ಮಕ್ಕಾ ಪುರಸಭೆಯು ಲಾಕರ್‌ಗಳನ್ನು ಸ್ಥಾಪಿಸಲು ಹೊಸ ಸ್ಥಳದ ಹುಡುಕಾಟದಲ್ಲಿ ನಿರತವಾಗಿದೆ.

ಯಾತ್ರಾರ್ಥಿಗಳಿಗೆ ಮತ್ತು ಪವಿತ್ರ ಹರಮ್‌ಗೆ ಭೇಟಿ ನೀಡುವವರ ಅನುಕೂಲಕ್ಕಾಗಿ ಲಗೇಜ್ ಲಾಕರ್‌ಗಳನ್ನು ಸಂಪೂರ್ಣವಾಗಿ ಕೆಡವಲಾಗಿದೆ. ಹರಮ್‌ನಲ್ಲಿನ ದಟ್ಟಣೆ ಮತ್ತು ಅನುಕೂಲಕ್ಕಾಗಿ ಏಳು ಲಗೇಜ್ ಲಾಕರ್‌ಗಳು ಮತ್ತು ಕೆಲವು ಅಂಗಶುದ್ಧಿ ಕೇಂದ್ರಗಳನ್ನು ಪುರಸಭೆ ಅಧಿಕಾರಿಗಳು ನೆಲಸಮ ಮಾಡಿದ್ದಾರೆ.

ಹರಮ್‌ನ ಅಂಗಳದಲ್ಲಿರುವ ಲಾಕರ್‌ಗಳು ಸಾಮಾನು ಮತ್ತು ಬೆಲೆಬಾಳುವ ವಸ್ತುಗಳನ್ನು ನಿಕ್ಷೇಪಿಸುವ ಉದ್ದೇಶಿಸದಿಂದ ನಿರ್ಮಿಸಲಾಗಿದ್ದವು.

ನೆಲಸಮಗೊಳಿಸಿದ ಲಗೇಜ್ ಲಾಕರ್‌ಗಳ ಬದಲಾಗಿ ಹೊಸ ಲಾಕರ್‌ಗಳನ್ನು ಸ್ಥಾಪಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದು, ಮಕ್ಕಾ ಪುರಸಭೆ ಮತ್ತು ಇಬ್ಬರು ಹರಮ್ ಅಧಿಕಾರಿಗಳು ಪವಿತ್ರ ಮಸೀದಿಗೆ ಭಕ್ತರು ಬರುವ ಮುಖ್ಯ ಹೆದ್ದಾರಿಗಳಲ್ಲಿ ಸ್ಥಾಪಿಸಲು ಯೋಜಿಸುತ್ತಿದ್ದಾರೆ.

ವಿಶ್ವಾಸಿಗಳಿಗೆ ಅನುಕೂಲವಾಗುವಂತೆ ಹೊಸ ಲಾಕರ್‌ಗಳನ್ನು ಎಲ್ಲಿ ಸ್ಥಾಪಿಸಬೇಕು ಎಂದು ಅಧಿಕಾರಿಗಳು ಅದ್ಯಯನ ನಡೆಸುತ್ತಿದ್ದಾರೆ. ಪುರಸಭೆಯ ಮುಂದೆ ಕೆಲವು ಸಲಹೆಗಳನ್ನು ನೀಡಲಾಗಿದ್ದರೂ, ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗಿಲ್ಲ. ಪರಿಶುದ್ಧ ಹರಮ್ ಮಸೀದಿಗೆ ತೆರಳುವ ಪ್ರದಾನ ರಸ್ತೆಗಳಾದ ಇಬ್ರಾಹೀಂ ಖಲೀಲ್ ರಸ್ತೆ, ಕುದೈ, ಗಝ್ಝ, ಅಜ್ಯಾದ್, ಉಮ್ ಅಲ್-ಖುರಾಕ್ಕೆ ಹೋಗುವ ಮುಖ್ಯ ರಸ್ತೆಗಳಲ್ಲಿ ಸ್ಥಾಪಿಸಲು ಅಧಿಕಾರಿಗಳು ಸೂಚಿಸಿದ್ದಾರೆ ಎನ್ನಲಾಗಿದೆ.

error: Content is protected !! Not allowed copy content from janadhvani.com