janadhvani

Kannada Online News Paper

ಕುವೈತ್: ಬೈಕ್ ‘ಡೆಲಿವರಿ ಬಾಯ್’ ಗಳನ್ನು ಗುರಿಯಾಗಿಸಿ ತಪಾಸಣೆ

ಕುವೈತ್ ಸಿಟಿ: ಬೈಕ್ ಮೂಲಕ ವಿತರಣೆ ಮಾಡುವವರನ್ನು ಗುರಿಯಾಗಿಸಿ, ಕುವೈತ್ ಗೃಹಸಚಿವಾಲಯವು ತಪಾಸಣಾ ಶಿಬಿರ ನಡೆಸಲು ಮುಂದಾಗಿದೆ. ಡೆಲಿವರಿ ಕೆಲಸಗಾರರು ವ್ಯಾಪಕವಾಗಿ ಟ್ರಾಫಿಕ್ ಕಾನೂನುಗಳನ್ನು ಉಲ್ಲಂಘಿಸುವ ಬಗ್ಗೆ ದೂರುಗಳು ದಾಖಲಾಗಿರುಗವ ಹಿನ್ನೆಲೆಯಲ್ಲಿ ಈ ಕ್ರಮ ಎನ್ನಲಾಗಿದೆ.

ಆಹಾರ ಪದಾರ್ಥಗಳು, ಇತರ ಸಾಮಾಗ್ರಿಗಳನ್ನು ದ್ವಿಚಕ್ರವಾಹನಗಳಲ್ಲಿ ಮನೆಗಳಿಗೆ ತಲುಪಿಸುವ ಕೆಲಸಗಾರರು ಟ್ರಾಫಿಕ್ ನಿಯಮಗಳನ್ನು ಪಾಲಿಸುವುದರಲ್ಲಿ ನಿರಾಸಕ್ತಿ ತೋರಿಸುವವರಾಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಹೆಲ್ಮೆಟ್ ಧರಿಸದಿರುವುದು, ಪರವಾನಗಿ ರಹಿತ ವಾಹನ ಚಲಾಯಿಸುವುದು, ಕೆಂಪು ದೀಪಗಳನ್ನು ಉಲ್ಲಂಘಿಸುವುದು ಮುಂತಾದ ಟ್ರಾಫಿಕ್ ನಿಯಮಗಳ ಉಲ್ಲಂಘನೆ ವ್ಯಾಪಕವಾಗಿ ಕಂಡು ಬರುತ್ತದೆ ಎಂಬುದಾಗಿ ದೂರುಗಳು ಬರುತ್ತಿವೆ.ಕಾಂಬೈನ್ ಮೂಲಕ ಅಧಿಕಾರಿಗಳ ಗುರಿ ಕೂಡ ಇಂತವರೇ ಅಗಿದ್ದಾರೆ.

ಆರು ಗವರ್ನರೇಟ್‌ಗಳಲ್ಲೂ ಪ್ರತ್ಯೇಕ ಗುಂಪುಗಳ ಮೂಲಕ ಪರಿಶೋಧನೆ ನಡೆಸಲು ಯೋಜನೆ ರೂಪಿಸಲಾಗಿದೆ. ಡೆಲಿವರಿ ಕಾರ್ಮಿಕರು ಎಚ್ಚರಿಕೆ ನೀಡದೆ ಟ್ರಾಕ್ ಬದಲಾಯಿಸುವ ಮೂಲಕ ಹೆಚ್ಚಿನ ಅಪಘಾತಗಳು ಸಂಭವಿಸುತ್ತದೆ. ಡೆಲಿವರಿ ಬಾಯ್‌ಗಳು ಅಪಘಾತಕ್ಕೆ ಈಡಾಗುವ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಿಲ್ಲದಿದ್ದರೂ, ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ಬೈಕ್ ಅಪಘಾತಗಳು ಹೆಚ್ಚಾಗಿರುವುದಾಗಿ ಆಸ್ಪತ್ರೆ ಮೂಲಗಳು ಸ್ಪಷ್ಟಪಡಿಸಿದೆ.